ಬೆಂಗಳೂರು: ರಾಜ್ಯದಲ್ಲಿ ಕೊರೋನಾಗೆ ಕಡಿವಾಣ ಹಾಕಲು ಜಾರಿ ಮಾಡಿದ್ದ ಮೊದಲ ವಾರದ ವೀಕೆಂಡ್ ಕರ್ಫ್ಯೂ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯಗೊಂಡಿದೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ಆರಂಭವಾಗಿದ್ದ ವಾರಾಂತ್ಯ ಕರ್ಫ್ಯೂ ಇಂದು ಮುಂಜಾನೆ 5 ಗಂಟೆಗೆ ಅಂತ್ಯವಾಗಿದೆ. ಇಂದಿನಿಂದ ಶುಕ್ರವಾರ ರಾತ್ರಿವರೆಗೆ ಜನಜೀವನ ಸಹಜ ಸ್ಥಿತಿಯಲ್ಲಿ ಇರುತ್ತದೆ. ಆದರೆ ಈ ಅವಧಿಯಲ್ಲಿ ನೈಟ್ ಕರ್ಫ್ಯೂ ಮುಂದುವರೆಯಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ದೈನಂದಿನ ಕರ್ಫ್ಯೂ ಇರಲಿದೆ. ಜನವರಿ 14 ರ ರಾತ್ರಿಯಿಂದ 17 ರ ಬೆಳಗ್ಗೆ 5 ಗಂಟೆಯವರೆಗೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ.