ಕೂದಲಿನ ಸೌಂದರ್ಯ ವೃದ್ಧಿಗೆ ಪ್ರತಿಯೊಬ್ಬರು ಪ್ರಯತ್ನಿಸ್ತಾರೆ. ಸುಂದರ ಕೂದಲು ಈಗ ಅಪರೂಪ. ಒತ್ತಡದ ಜೀವನ, ಕೆಲಸ, ಕಲುಷಿತ ವಾತಾವರಣ ಕೂದಲಿನ ಸೌಂದರ್ಯವನ್ನು ಹಾಳು ಮಾಡ್ತಿದೆ. ಕೂದಲು ಉದುರುವುದು, ಹೊಟ್ಟು, ಒರಟು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಅನೇಕರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆದ್ರೆ ಮನೆಯಲ್ಲಿಯೇ ಮದ್ದಿದೆ.
ಹೊಳೆಯುವ, ಮೃದು ಕೂದಲು ನಿಮ್ಮದಾಗಬೇಕೆಂದ್ರೆ ಕೂದಲಿಗೆ ಮೊಸರು ಬೆಸ್ಟ್. ಕೂದಲು ಶುಷ್ಕವಾಗಿದ್ದರೆ ಆವಕಾಡೊ ಜೊತೆ ಮೊಸರು ಬೆರೆಸಿ ಹಚ್ಚಿ. ಎರಡು ಹಿಸುಕಿದ ಆವಕಾಡೊ ನುಣ್ಣಗೆ ಮಾಡಿ, ಒಂದು ಬಾಳೆಹಣ್ಣು, ಅರ್ಧ ಕಪ್ ಮೊಸರು, 2 ಚಮಚ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ.ಈ ಪೇಸ್ಟನ್ನು ಕೂದಲಿಗೆ ಹಚ್ಚಿ. 45 ನಿಮಿಷಗಳ ನಂತ್ರ ಶಾಂಪೂ ಹಾಕಿ ಸ್ವಚ್ಛಗೊಳಿಸಿಕೊಳ್ಳಿ.
ಹೊಟ್ಟಿನ ಸಮಸ್ಯೆಯಿರುವವರು ಮೊಸರಿನ ಈ ಉಪಾಯ ಮಾಡಬಹುದು. ಮೂರು ಚಮಚ ಮೊಸರು, ಸ್ವಲ್ಪ ನಿಂಬೆ ರಸ, 3 ಚಮಚ ಒಣಗಿದ ಮೆಂತ್ಯೆ ಪುಡಿ ಹಾಗೂ ಕರ್ಪೂರದ ಪುಡಿಯನ್ನು ಮಿಕ್ಸ್ ಮಾಡಿ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಶವರ್ ಕ್ಯಾಪ್ ಹಾಕಿ 45 ನಿಮಿಷ ಬಿಟ್ಟು ನಂತ್ರ ತಲೆ ಸ್ನಾನ ಮಾಡಿ.