alex Certify ‘ಬಡತನ’ ವನ್ನೇ ನಿವಾರಿಸಬಲ್ಲದು ಮೊಸರು; ಹಣದಿಂದ ಭರ್ತಿಯಾಗುತ್ತದೆ ತಿಜೋರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಡತನ’ ವನ್ನೇ ನಿವಾರಿಸಬಲ್ಲದು ಮೊಸರು; ಹಣದಿಂದ ಭರ್ತಿಯಾಗುತ್ತದೆ ತಿಜೋರಿ…!

ಮೊಸರು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲೊಂದು. ಜ್ಯೋತಿಷ್ಯ ಶಾಸ್ತ್ರದಲ್ಲೂ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೇವರಿಗೆ ಅರ್ಪಿಸುವ ಪಂಚಾಮೃತದಲ್ಲಿ ಸಹ ಮೊಸರನ್ನು ಬಳಸಲಾಗುತ್ತದೆ. ದೇವರಿಗೆ ಮೊಸರಿನಿಂದ ಅಭಿಷೇಕ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಸಾಮಾನ್ಯವಾಗಿ ಶುಭ ಕಾರ್ಯಗಳಿಗೂ ಮುನ್ನ ಮೊಸರು ತಿಂದು ಮನೆಯಿಂದ ಹೊರಬರುವ ವಾಡಿಕೆಯೂ ಇದೆ. ಮೊಸರು ನಮ್ಮ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲದು. ಶಿವನಿಗೆ ಮೊಸರು ಮತ್ತು ಹಾಲಿನ ಅಭಿಷೇಕ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಅಂಥವರು ಶಿವನಿಗೆ ಮೊಸರಿನಿಂದ ಅಭಿಷೇಕ ಮಾಡಬೇಕು. ಹೀಗೆ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಬದುಕಿನ ಪ್ರತಿ ಹಂತದಲ್ಲೂ ಪದೇ ಪದೇ ವೈಫಲ್ಯವನ್ನು ಎದುರಿಸುತ್ತಿದ್ದರೆ, ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಮೊಸರು ಮತ್ತು ಅನ್ನದ ತಿಲಕವನ್ನು ಹಣೆಯ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶಾಸ್ತ್ರಗಳ ಪ್ರಕಾರ, ಜಾತಕ ಮತ್ತು ಗ್ರಹ ದೋಷಗಳನ್ನು ತೆಗೆದುಹಾಕಲು ಮೊಸರನ್ನು ಪ್ರತಿದಿನ ಸೇವಿಸಬೇಕು. ಇದರಿಂದ ಗ್ರಹದೋಷಗಳಿಂದ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.

ಸಂಪತ್ತನ್ನು ಪಡೆಯಲು ಮತ್ತು ಹಣದ ನಷ್ಟವನ್ನು ತಡೆಯಲು, ಪ್ರತಿದಿನ ಮೊಸರಿನಲ್ಲಿ ಸುಗಂಧ ದ್ರವ್ಯ ಬೆರೆಸಿ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ. ಯಾವುದೇ ಪ್ರಮುಖ ಕೆಲಸವನ್ನು ಮಾಡುವ ಮುನ್ನ ಮೊಸರನ್ನು ಸೇವಿಸಬೇಕು. ಮೊಸರು ನಮ್ಮ ಮನಸ್ಸು ಮತ್ತು ದೇಹವನ್ನು ತಂಪಾಗಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳಲ್ಲಿ ಕೋಪ ಹೆಚ್ಚಾಗಿದ್ದರೆ, ಓದಿನಲ್ಲಿ ಆಸಕ್ತಿ ತೋರಿಸದಿದ್ದರೆ ಮೊಸರನ್ನು ಬೆಳ್ಳಿಯ ಚಮಚ ಅಥವಾ ಬಟ್ಟಲಿನಲ್ಲಿ ಹಾಕಿ ಮಲಗುವಾಗ ಅವರ ತಲೆಯ ಬಳಿ ಇರಿಸಿ. ಇದನ್ನು ಕೆಲವು ಅಡಿಗಳ ಅಂತರದಲ್ಲಿ ಇಡಬೇಕು. ಬೆಳಗ್ಗೆ ಆ ಮೊಸರನ್ನು ನದಿ ಅಥವಾ ನೀರಿನಲ್ಲಿ ಹರಿಬಿಡಬೇಕು. ಇದನ್ನು ನಿರಂತರವಾಗಿ ಮಾಡುವುದರಿಂದ ಮಗುವಿನ ಮನಸ್ಸು ಶಾಂತವಾಗಿರುತ್ತದೆ, ಕೋಪ ಕಡಿಮೆಯಾಗುತ್ತದೆ ಮತ್ತು  ಆತ್ಮವಿಶ್ವಾಸ ಹೆಚ್ಚಾಗುತ್ತದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...