ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಜೇಬಿನಲ್ಲಿ ಕರ್ಚಿಫ್ ಇಟ್ಟುಕೊಳ್ತಾರೆ. ಹೆಣ್ಣು ಮಕ್ಕಳಿರಲಿ ಇಲ್ಲ ಗಂಡು ಮಕ್ಕಳಿರಲಿ ಜೇಬು ಅಥವಾ ಬ್ಯಾಗ್ ನಲ್ಲಿಡುವ ಕರ್ಚಿಫ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಕರ್ಚಿಪ್ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲ ಕರ್ಚಿಪ್ ದುರಾದೃಷ್ಟಕ್ಕೆ ಕಾರಣವಾಗುತ್ತದೆ.
ಶಾಸ್ತ್ರಗಳ ಪ್ರಕಾರ, ಕರ್ಚಿಪ್ ಮೇಲೆ ಏನನ್ನೂ ಬರೆಯಬಾರದು. ಇದು ಏಕಾಗ್ರತೆಗೆ ಭಂಗ ತರುತ್ತದೆ. ಯಾವುದೇ ಕೆಲಸಕ್ಕೆ ಮನಸ್ಸು ಬರುವುದಿಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಎಂದೂ ಬೇರೆಯವರ ಕರ್ಚಿಪ್ ಬಳಸಬಾರದು. ಬೇರೆಯವರ ಕರ್ಚಿಪ್ ಬಳಸುವ ಹವ್ಯಾಸ ನಿಮಗಿದ್ದರೆ ಈಗ್ಲೇ ಅದನ್ನು ಬಿಟ್ಟುಬಿಡಿ. ಇದು ನಿಮ್ಮ ಜೀವನವನ್ನು ಹಾಳು ಮಾಡುತ್ತದೆ. ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ.
ನಿಮ್ಮ ಕರ್ಚಿಪನ್ನು ಎಂದೂ ಬೇರೆಯವರಿಗೆ ನೀಡಬೇಡಿ. ಬೇರೆಯವರಿಗೆ ನಿಮ್ಮ ಕರ್ಚಿಪ್ ನೀಡಿದ್ರೆ ದುರಾದೃಷ್ಟವನ್ನು ಮೈಮೇಲೆ ಎಳೆದುಕೊಂಡಂತೆ.
ಜೇಬಿನಲ್ಲಿ ಕರ್ಚಿಪ್ ಇರುವುದು ಒಳ್ಳೆಯದು. ಸಕಾರಾತ್ಮಕ ಶಕ್ತಿ ವೃದ್ಧಿಗೆ ಇದು ನೆರವಾಗುತ್ತದೆ. ಕರ್ಚಿಪನ್ನು ನಾಲ್ಕು ಅಥವಾ ಆರು ಮಡಿಕೆ ಮಾಡಿ ಜೇಬಿನಲ್ಲಿ ಇಡಬೇಕು.