
ಬೇಸಿಗೆಯಲ್ಲಿ ಹೆಚ್ಚಾಗಿ ನಾವು ಸೌತೆಕಾಯಿಯನ್ನು ಸೇವಿಸುತ್ತೇವೆ. ಅದರಲ್ಲಿ ನೀರಿನ ಅಂಶ ಹೆಚ್ಚು ಇರುವ ಕಾರಣ ಅದು ದೇಹದ ದಾಹವನ್ನು ತಣಿಸುತ್ತದೆ. ಅಲ್ಲದೆ ದೇಹವನ್ನು ತಂಪಾಗಿ ಇಡುತ್ತದೆ.
ಸೌತೆಕಾಯಿಯಲ್ಲಿ ಶೇಕಡಾ 95 ರಷ್ಟು ನೀರು, ಶೇ.5 ರಷ್ಟು ನಾರಿನ ಅಂಶವನ್ನು ಹೊಂದಿರುವುದರಿಂದ ಇದು ನಮ್ಮ ದೇಹವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುತ್ತದೆ.
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳು ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಸೌತೆಕಾಯಿಯ ತಿರುಳುಗಳನ್ನು ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಅಲ್ಲದೆ ದೇಹವನ್ನು ತಂಪಾಗಿ ಇಡುತ್ತದೆ.
ಚರ್ಮದ ಉರಿ ಹಾಗೂ ಸನ್ ಬರ್ನ್ ಗಳಿಗೆ ಸೌತೆಕಾಯಿ ರಸ ಉತ್ತಮ ಮದ್ದು. ಸೌತೆಕಾಯಿಯಲ್ಲಿ ಹೆಚ್ಚು ನೀರಿನ ಪ್ರಮಾಣ ಹಾಗೂ ಕಡಿಮೆ ಕ್ಯಾಲೋರಿಗಳು ಇರುವುದರಿಂದ ಅದು ಪಚನ ಕ್ರಿಯೆಗೆ ಅನುಕೂಲ ಆಗುತ್ತದೆ. ಈ ಸೌತೆಕಾಯಿಯ ರಸ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದಿಸುವ ಗ್ರಂಥಿಗೆ ಸಹಾಯ ಮಾಡುತ್ತದೆ.
ಮುಖದಲ್ಲಿ ಕಪ್ಪು ಕಲೆ ಇದ್ದರೆ ಸೌತೆಕಾಯಿಯ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸಿದರೆ ಕಲೆಗಳು ಮಾಯವಾಗುತ್ತದೆ.
ತೂಕ ನಷ್ಟಕ್ಕೂ ಸಹಾಯಕ ಸೌತೆಕಾಯಿ ಜ್ಯೂಸ್.