alex Certify ನಿಮ್ಮ ʼಸೌಂದರ್ಯʼ ಹೆಚ್ಚಿಸಲು ಸಹಾಯಕ ಸೌತೆಕಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ʼಸೌಂದರ್ಯʼ ಹೆಚ್ಚಿಸಲು ಸಹಾಯಕ ಸೌತೆಕಾಯಿ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ ಉಷ್ಣಾಂಶವನ್ನು ಸೌತೆಕಾಯಿ ಕಡಿಮೆ ಮಾಡುತ್ತದೆ.

ಸೌತೆಕಾಯಿಯನ್ನು ಕತ್ತರಿಸುವಾಗ, ತಿರುಳು ಹಾಗೂ ಸಿಪ್ಪೆಯನ್ನು ತೆಗೆದು ಮುಖ, ಕತ್ತು, ಅಂಗಾಲು, ಅಂಗೈಗಳಿಗೆ ಚೆನ್ನಾಗಿ ತಿಕ್ಕಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ, ಇದರಿಂದ ಶರೀರದ ಉಷ್ಣಾಂಶವು ಕಡಿಮೆಯಾಗುತ್ತದೆ.

ವಾರದಲ್ಲಿ 2 ಬಾರಿ ಸೌತೆಕಾಯಿಯ ರಸವನ್ನು ಅರ್ಧ ಬಟ್ಟಲು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ತಲೆ, ನೆತ್ತಿ, ಮೈಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮ ಕಾಂತಿಯುತವಾಗುವ ಜೊತೆಗೆ ಮೃದುವಾಗುತ್ತದೆ.

ಸೌತೆ ರಸ 1 ಬಟ್ಟಲು, 3-4 ಚಮಚ ನಿಂಬೆರಸ, 2 ಚಮಚ ಅರಿಶಿನ ಪುಡಿ ಮಿಶ್ರಣ ಮಾಡಿ, ಮುಖ, ಕತ್ತು, ಕೈ- ಕಾಲುಗಳಿಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡುವುದರಿಂದ ದೇಹದ ಮೇಲೆ ಮೂಡಿರುವ ಕಲೆ ಕ್ರಮೇಣ ಮಾಯವಾಗುತ್ತವೆ.

ಸ್ಥೂಲಕಾಯದವರು ತಮ್ಮ ಆಹಾರದೊಂದಿಗೆ ಸೌತೆಕಾಯಿಯನ್ನು ಸೇವಿಸುವುದರಿಂದ ಸ್ಥೂಲಕಾಯ ಕಡಿಮೆಯಾಗುತ್ತದೆ. ಸೌತೆಯ ಬೀಜವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು, ಅದಕ್ಕೆ ತುಳಸಿ ಎಲೆ ಅರೆದು ಸೇರಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ತುರಿಕೆ ನಿವಾರಣೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...