ನವದೆಹಲಿ: ಸಿಟಿ ಸ್ಕ್ಯಾನ್ ಅಪಾಯಕಾರಿಯಲ್ಲ ಎಂದು ಭಾರತೀಯ ರೇಡಿಯಾಲಜಿಕಲ್ ಮತ್ತು ಇಮೇಜಿಂಗ್ ಸಂಸ್ಥೆ(IRAI) ತಿಳಿಸಿದೆ.
ಕೊರೋನಾ ಸೋಂಕಿತರಿಗೆ ಪದೇ ಪದೇ ಸಿಟಿ ಸ್ಕ್ಯಾನ್ ಮಾಡುವುದು ಸರಿಯಲ್ಲ. ಒಂದು ಸಲ ಸಿಟಿ ಸ್ಕ್ಯಾನ್ ಮಾಡುವುದೆಂದರೆ 300 -400 ಸಲ ಎಕ್ಸ್ ರೇ ಬಾರಿ ಮಾಡಿದಂತೆ. ಸಿಟಿ ಸ್ಕ್ಯಾನ್ ನಿಂದ ಕ್ಯಾನ್ಸರ್ ಗೆ ತುತ್ತಾಗುವ ಅಪಾಯವಿದೆ ಎಂದು ನವದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ನೀಡಿದ್ದ ಹೇಳಿಕೆಯನ್ನು IRAI ತಳ್ಳಿಹಾಕಿದ್ದು, ಗುಲೇರಿಯಾ ಅವರು ನೀಡಿದ ಹೇಳಿಕೆ ದಾರಿ ತಪ್ಪಿಸುವಂತಿದೆ ಎಂದು ತಿಳಿಸಿದೆ.
ಕೊರೋನಾ ಸೇರಿದಂತೆ ಅನೇಕ ರೋಗಗಳ ಪತ್ತೆಯಲ್ಲಿ ಸಿಟಿ ಸ್ಕ್ಯಾನ್ ಮಹತ್ವದ ಪಾತ್ರ ವಹಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳು ಬಂದಿದ್ದು ಕಡಿಮೆ ತೀವ್ರತೆಯ ಆಲ್ಟ್ರಾಕಿರಣಗಳನ್ನು ಬಳಸಲಾಗುತ್ತದೆ. 30- 40 ವರ್ಷಗಳ ಹಿಂದೆ ಅವರು ಹೇಳಿದಂತಹ ರೀತಿ ಇತ್ತು. ಪ್ರಸ್ತುತ ಒಂದು ಸಿಟಿ ಸ್ಕ್ಯಾನ್ ಕೇವಲ 5 -10 ಎಕ್ಸ್ ರೇ ಗಳಷ್ಟು ತೀವ್ರತೆ ಹೊಂದಿರುತ್ತದೆ ಎಂದು ಹೇಳಲಾಗಿದೆ.