alex Certify ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಸಿ.ಟಿ. ರವಿ: ಚುನಾವಣೆ ಬಳಿಕ ಸಿಡಿಯಲಿದೆ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಸಿ.ಟಿ. ರವಿ: ಚುನಾವಣೆ ಬಳಿಕ ಸಿಡಿಯಲಿದೆ ಬಾಂಬ್

ಚಿಕ್ಕಮಗಳೂರು: ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ಮಾಜಿ ಸಚಿವ ಸಿ.ಟಿ. ರವಿ ಅಸಮಾಧಾನಗೊಂಡಿದ್ದಾರೆ. ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಮನದಲ್ಲಿ ಬಹಳ ಭಾವನೆಗಳು ಇವೆ. ಹೇಳಲು ಬಹಳ ಇದೆಯಾದರೂ ಸಮಯ ಇದಲ್ಲ ಎಂದು ಚಿಕ್ಕಮಗಳೂರು ನಗರದಲ್ಲಿ ರವಿ ಹೇಳಿದ್ದಾರೆ.

ಸದ್ಯಕ್ಕೆ ದೇಶದ ಹಿತಕ್ಕಾಗಿ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ. ಪಕ್ಷ ಹಾಗೂ ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನು ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗುವುದಿಲ್ಲ. ಸಮಯ ಬರಲಿ ಎಲ್ಲವನ್ನು ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುವುದಾದರೆ ಚುನಾವಣೆಯ ನಂತರವೇ. ವಿಧಾನಸಭೆ ಚುನಾವಣೆಯಲ್ಲಿ ಯಾರು ಹೇಗೆ ನಡೆದುಕೊಂಡರು ಎಂದು ಹೇಳುತ್ತೇನೆ. ಚುನಾವಣೆ ಬಳಿಕ ಬಹಳ ವಿಷಯಗಳು ಹೇಳಲು ಇವೆ. ಈಗ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಅದೊಂದೇ ಗುರಿ ಇರುವುದು. 28 ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಅದಕ್ಕೆ ಅಳಿಲು ಸೇವೆ ಮಾಡುವುದಷ್ಟೇ ಕೆಲಸ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...