ದಾವಣಗೆರೆ: ಪೋಕ್ಸೋ ಕೇಸ್ ನಲ್ಲಿ ಮುರುಘಾ ಮಠದ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿ, ಮುರುಘಾ ಸ್ವಾಮೀಜಿ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯ ಏನು ಎಂಬುದು ಹೊರ ಬರುತ್ತದೆ. ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರು ಸುತ್ತಿ ಬಂದಿರುತ್ತದೆ. ಸನಾತನ ಧರ್ಮದಲ್ಲಿ ಸತ್ಯಕ್ಕೆ ಗೆಲುವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಮೊದಲು ಪಕ್ಷವನ್ನು ಜೋಡಿಸುವ ಕೆಲಸ ಮಾಡಲಿ. ಪಕ್ಷವನ್ನು ಸರಿಪಡಿಸಿಕೊಳ್ಳದಿದ್ದರೆ ಪಕ್ಷದ ಬೋರ್ಡ್ ಹಾಕಲು ಕೂಡ ಕಾರ್ಯಕರ್ತರು ಸಿಗುವುದಿಲ್ಲ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನವರು ಸಂಘಟನೆಗೆ ಸಂಬಂಧಿಸದ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಜನರ ಭಾವನೆ ಕೂಡಿಸುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಈಗ ಅವಶ್ಯಕತೆ ಇರುವುದು ಪಕ್ಷವನ್ನು ಜೋಡಿಸುವುದಾಗಿದೆ. ಭಾರತ ಜೋಡೋ ಯಾತ್ರೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಭಯವಿಲ್ಲ. ಈಗಿನ ಕಾಂಗ್ರೆಸ್ ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶ, ಮಧ್ಯ ಪ್ರದೇಶದ ಚುನಾವಣೆ ಫಲಿತಾಂಶ ಬರಲಿ. ನವೆಂಬರ್ ನಂತರ ರಾಜ್ಯದ ಕಾಂಗ್ರೆಸ್ ನಾಯಕರು ಪಕ್ಷ ಬಿಡುತ್ತಾರೆ. ನಮ್ಮ ಪಕ್ಷದಿಂದ ಯಾರೂ ಹೋಗಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಆದಷ್ಟು ಬೇಗ ಪಕ್ಷ ತೊರೆಯಲಿ ಎಂದು ಹೇಳಿದ್ದಾರೆ.