
ಬೆಂಗಳೂರು: ಸಿದ್ದರಾಮಯ್ಯ ಅವರ ವಿರುದ್ಧ ಮುಕುಡಪ್ಪ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಸತ್ಯ ಹೇಳಿದರೆ ಕೆಲವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಅದೇ ವಿಷಯ ಹೇಳಿದ್ದಕ್ಕೆ ನನ್ನ ವಿರುದ್ಧವೂ ಪ್ರತಿಭಟನೆ ಮಾಡಿದ್ದರು. ಈಗ ಸ್ವತಃ ಕಂಡವರೇ ಸಿದ್ದರಾಮಯ್ಯನವರ ಕುರಿತು ಹೇಳಿದ್ದಾರೆ. ನಾನು ಹೇಳಿದ್ದಕ್ಕೆ ಎದ್ದು ಬಂದು ಎದೆಗೆ ಒದ್ದವರ ತರಹ ಆಡಿದರು. ಮೈಸೂರಿನ ಜನರನ್ನು ಕೇಳಿದರೆ ನಿಮಗೆ ಗೊತ್ತಾಗುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಸಿದ್ದರಾಮಯ್ಯನವರ ಕೆಲವೊಂದು ಸಂಗತಿ ಬಗ್ಗೆ ನನಗೆ ಕೇಳಬೇಡಿ. ಯಾವತ್ತೂ ಋಷಿ ಮೂಲ, ನದಿ ಮೂಲ ಕೇಳಬಾರದು ಎಂದು ಹೇಳಿದ್ದಾರೆ.