ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ಸುವರ್ಣಸೌಧದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿದ ಪೊಲೀಸರು ರಾತ್ರಿಯಿಡಿ ಅವರನ್ನು ಸುತ್ತಾಡಿಸಿದ್ದಾರೆ.
ಸಿ.ಟಿ. ರವಿ ಎಂದು ಬಂಧಿಸಿ ಬೆಳಗಾವಿ, ಧಾರವಾಡದಲ್ಲಿ ಪೊಲೀಸರು ಸುತ್ತಾಡಿಸಿದ್ದಾರೆ. ಇಡೀ ರಾತ್ರಿ ಅವರನ್ನು ಸುತ್ತಾಡಿಸಲಾಗಿದೆ. ಖಾನಾಪುರ ಠಾಣೆಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುತ್ತೇವೆ ಎಂದು ಪೊಲೀಸರು ಸುತ್ತಾಡಿಸುತ್ತಿದ್ದಾರೆ. ತಲೆಗೆ ಪೆಟ್ಟಾಗಿ ರಕ್ತ ಸೋರಿದ್ದರೂ ರವಿ ಅವರನ್ನು ಸುತ್ತಾಡಿಸಿದ್ದಾರೆ. ಕಿತ್ತೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ರೌಂಡ್ಸ್ ನಡೆಸಿದ್ದು, ಕಿತ್ತೂರು, ಧಾರವಾಡ, ರಾಮದುರ್ಗ, ಬೆಳಗಾವಿಯಲ್ಲಿ ಸುತ್ತಾಡಿಸಲಾಗಿದೆ. ರಾಮದುರ್ಗಕ್ಕೆ ಬರುತ್ತಿದ್ದಂತೆ ಪೊಲೀಸರ ನಡೆಗೆ ಸಿ.ಟಿ. ರವಿ ಸುಸ್ತಾಗಿ ಹೋಗಿದ್ದಾರೆ.
ಸಿ.ಟಿ. ರವಿ ಬಂಧನದ ಸುದ್ದಿ ಮಾಡಲು ಹೋದ ವರದಿಗಾರರ ಮೇಲೆ ಪೊಲೀಸರು ದರ್ಪ ನಡೆಸಿದ್ದಾರೆ. ಮಾಧ್ಯಮದವರ ಕಾರು ತಡೆದು ರಾಮದುರ್ಗ ಪೊಲೀಸರು ಲಾಠಿ ಬೀಸಿದ್ದಾರೆ. ಪೊಲೀಸರ ವಾಹನದಿಂದಲೂ ಮಾಧ್ಯಮದವರ ಕಾರ್ ಗೆ ಗುದ್ದಿಸಿ ಗೂಂಡಾ ವರ್ತನೆ ತೋರಿದ್ದಾರೆ. ನಿರಂತರವಾಗಿ ಸಿ.ಟಿ. ರವಿಯನ್ನು ಕಾರ್ ನಲ್ಲಿ ಪೊಲೀಸರ ಸುತ್ತಾಡಿಸುತ್ತಿದ್ದಾರೆ.
ಇದಕ್ಕೆ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಮೇಲಿಂದ ಮೇಲೆ ಡೈರೆಕ್ಷನ್ ಗಳು ಬರುತ್ತಿವೆ. ಮಾನಸಿಕ ಹಿಂಸೆ ಕೊಡಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಸುವರ್ಣಸೌಧದಲ್ಲಿ ಮೂರು ಬಾರಿ ನನ್ನ ಮೇಲೆ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.