
ಚಿಕ್ಕಮಗಳೂರು: ಸಿ.ಟಿ. ರವಿ ದುರಹಂಕಾರವೇ ಸೋಲಿಗೆ ಕಾರಣ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿಕೆಗೆ ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
ತಮ್ಮಯ್ಯ ಅವರು ಗೆದ್ದ ಅಮಲಿನಲ್ಲಿ ಮಾತನಾಡಿದ್ದಾರೆ. ಅಮಲು ಎಷ್ಟು ದಿನ ಇರುತ್ತದೆ. ಒಂದಲ್ಲ ಒಂದು ದಿನ ಅಮಲು ಇಳಿಯಲೇಬೇಕು. ಅವರು ನನ್ನ ಬಳಿಗೆ ಬಂದು ಸಹಿ ಮಾಡಿಸಿಕೊಂಡು ಹೋಗುತ್ತಿದ್ದರು. ಅದನ್ನು ಮರೆಯಬಾರದು ಎಂದು ಹೇಳಿದ್ದಾರೆ.