CSK ಯಶೋಗಾಥೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದ ಎಡಿಜಿಪಿ ಅಲೋಕ್ ಕುಮಾರ್ 24-05-2023 2:10PM IST / No Comments / Posted In: Featured News, Live News, Sports ಐಪಿಎಲ್ 2023 ಮೊದಲ ಕ್ವಾಲಿಫೈಯರ್ ಹಂತದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಲ್ಲಿ ನಾಯಕತ್ವ ಮತ್ತು ತಂಡ ನಿರ್ಮಾಣದಂತಹ ಗುಣಗಳನ್ನ ಬೆಳೆಸಲು CSK ಯಶಸ್ಸಿನ ಕಥೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಕಲಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2 ವರ್ಷ ಬ್ಯಾನ್ ಆಗಿದ ಬಳಿಕವೂ ತಂಡವು ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದ್ದು ಮತ್ತೊಮ್ಮೆ ಐಪಿಎಲ್ ಫೈನಲ್ ಪ್ರವೇಶಿಸಿರುವುದು ತಂಡದ ಅಭಿಮಾನಿಗಳಿಗೆ ಖುಷಿ ತಂದಿದೆ. ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಹಂತದಲ್ಲಿ CSK, ಗುಜರಾತ್ ಟೈಟನ್ಸ್ ವಿರುದ್ಧ 15 ರನ್ ಗಳ ಜಯ ಗಳಿಸಿದೆ. ವಿಶೇಷವೆಂದರೆ CSK ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡವಾಗಿದೆ. ಇದೀಗ 10ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಐಪಿಎಲ್ ಟ್ರೋಫಿಗಾಗಿ ಸೆಣಸಾಡಲಿದೆ. CSK success story must be included as part of curriculum in every Management institution for teaching students “ Leadership & Team Building” — alok kumar (@alokkumar6994) May 24, 2023