ಐಪಿಎಲ್ ಫೈನಲ್ ಪಂದ್ಯ ನೋಡಲು ರೈಲ್ವೆ ನಿಲ್ದಾಣದಲ್ಲೇ ಮಲಗಿದ ಸಿ ಎಸ್ ಕೆ ಫ್ಯಾನ್ಸ್ 29-05-2023 6:24PM IST / No Comments / Posted In: Latest News, Live News, Sports ಐಪಿಎಲ್ ಫೈನಲ್ ಪಂದ್ಯಕ್ಕಾಗಿ ಕಾತರದಿಂದ ಕಾಯ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಮಳೆ ತಣ್ಣೀರೆರಚಿತ್ತು. ತೀವ್ರ ಮಳೆಯಿಂದಾಗಿ ಸೋಮವಾರಕ್ಕೆ ಪಂದ್ಯ ಮುಂದೂಡಿಕೆಯಾಗಿದ್ದು ಇಂದು ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಹೋರಾಟವನ್ನ ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಒಂದೇ ಒಂದು ಎಸೆತವನ್ನು ನೋಡದೆ ಮನೆಗೆ ಮರಳಬೇಕಾಯಿತು. ಈ ವೇಳೆ ಕೆಲವು ಅಭಿಮಾನಿಗಳು ಮನೆಗೆ ತೆರಳದೇ ರೈಲ್ವೆ ನಿಲ್ದಾಣಗಳಲ್ಲೇ ನಿದ್ರೆಗೆ ಮೊರೆಹೋಗಿದ್ದರು. ಮರುದಿನ ಪಂದ್ಯ ನೋಡಲು ಮತ್ತೆ ಊರಿಂದ ಬರುವ ಬದಲಾಗಿ ನಗರದಲ್ಲೇ ಉಳಿದು ಜಾಗ ಸಿಕ್ಕ ಕಡೆ ಮಲಗಿದ್ದಾರೆ. ಅದರಲ್ಲೂ ಸಿ ಎಸ್ ಕೆ ಅಭಿಮಾನಿಗಳು ಹಳದಿ ಜರ್ಸಿ ಧರಿಸಿ ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರದ ಪಂದ್ಯ ವೀಕ್ಷಣೆಗೆ ಹಿಂದಿನ ದಿನ ಪಡೆದಿದ್ದ ಟಿಕೆಟ್ಗಳನ್ನು ಬಳಸಲು ಅಭಿಮಾನಿಗಳಿಗೆ ಅವಕಾಶ ನೀಡಿದ್ದರೂ, ಮರುದಿನ ಫೈನಲ್ಗೆ ಹಿಂತಿರುಗಬೇಕಾಗಿರುವುದರಿಂದ ಹಲವಾರು ಅಭಿಮಾನಿಗಳು ಮನೆಗೆ ಮರಳುವ ಬದಲು ನಗರದಲ್ಲೇ ಉಳಿದರು. CSK ಜೆರ್ಸಿ ಧರಿಸಿ ಬಂದಿರುವ ಅಭಿಮಾನಿಗಳು ಧೋನಿ ನೋಡಲು ಕಾತರರಾಗಿದ್ದಾರೆ. Lots of CSK & cricket fans were sleeping at the railway station as the IPL final is postponed to Monday due to rain. Feel for them, travelled to see one man, as they might have booked the tickets for returning Sunday itself and now, many are waiting for today as well. pic.twitter.com/NQATTYprTo — Johns. (@CricCrazyJohns) May 29, 2023 It is 3 o'clock in the night when I went to Ahmedabad railway station, I saw people wearing jersey of csk team, some were sleeping, some were awake, some people, I asked them what they are doing, they said we have come only to see MS Dhoni @IPL @ChennaiIPL #IPLFinal #Ahmedabad pic.twitter.com/ZJktgGcv8U — Sumit kharat (@sumitkharat65) May 28, 2023