ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CSIR-CRRI) 209 ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಮತ್ತು ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು crridom.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಮಾರ್ಚ್ 22, 2025 ರ ಬೆಳಿಗ್ಗೆ 10 ಗಂಟೆಯಿಂದ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 21, 2025 ರ ಸಂಜೆ 5 ಗಂಟೆಯವರೆಗೆ ಅವಕಾಶವಿದೆ. ಮೇ/ಜೂನ್ 2025 ರಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಜೂನ್ 2025 ರಲ್ಲಿ ಕಂಪ್ಯೂಟರ್/ಸ್ಟೆನೋಗ್ರಫಿ ಪ್ರಾವೀಣ್ಯತಾ ಪರೀಕ್ಷೆ ನಡೆಯಲಿದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸ್ಟೆನೋಗ್ರಫಿ ಪ್ರಾವೀಣ್ಯತಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಪ್ರೊಬೇಷನ್‌ನಲ್ಲಿ ಇರಿಸಲಾಗುತ್ತದೆ.
ಹುದ್ದೆಗಳ ವಿವರ:
- ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್: 177 ಹುದ್ದೆಗಳು
- ವೇತನ: 19,900 – 63,200 ರೂ.
- ವಿದ್ಯಾರ್ಹತೆ: 10+2/XII ಅಥವಾ ತತ್ಸಮಾನ, ಕಂಪ್ಯೂಟರ್ ಟೈಪಿಂಗ್‌ನಲ್ಲಿ ಪ್ರಾವೀಣ್ಯತೆ
- ವಯೋಮಿತಿ: 28 ವರ್ಷಗಳು
- ಜೂನಿಯರ್ ಸ್ಟೆನೋಗ್ರಾಫರ್: 32 ಹುದ್ದೆಗಳು
- ವೇತನ: 25,500 – 81,100 ರೂ.
- ವಿದ್ಯಾರ್ಹತೆ: 10+2/XII ಅಥವಾ ತತ್ಸಮಾನ, ಸ್ಟೆನೋಗ್ರಫಿಯಲ್ಲಿ ಪ್ರಾವೀಣ್ಯತೆ.