ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೊ ಕರೆನ್ಸಿಗಳ ನಿಯಂತ್ರಣ ಹಾಗೂ ಖಾಸಗಿ ಕ್ರಿಪ್ಟೊ ಕರೆನ್ಸಿಗಳ ಹಾವಳಿಗೆ ನಿರ್ಬಂಧ ಹೇರಲು ಮಹತ್ವದ ವಿಧೇಯಕ ಮಂಡಿಸುವ ಸುಳಿವು ಕೊಟ್ಟಿದೆ.
ದೇಶದಲ್ಲಿ ಡಿಜಿಟಲ್ ಕರೆನ್ಸಿ ಅಥವಾ ಡಿಜಿಟಲ್ ಕಾಯಿನ್ ಎನ್ನುವುದು ಇದ್ದರೆ ಅದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕೃತ ಮುದ್ರೆಯದ್ದೇ ಆಗಿರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ. ಅದರಂತೆ ಆರ್.ಬಿ.ಐ.ನಿಂದಲೇ ಶೀಘ್ರ ಭಾರತದ ಕ್ರಿಪ್ಟೊ ಕರೆನ್ಸಿ ಬಿಡುಗಡೆಗೊಳ್ಳುವ ನಿರೀಕ್ಷೆ ಹೆಚ್ಚಾಗುತ್ತಿದೆ.
ಸದ್ಯದ ಮಟ್ಟಿಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸಿಕೊಂಡು ಆರ್.ಬಿ.ಐ., ತನ್ನ ಡಿಜಿಟಲ್ ಕಾಯಿನ್ ಪರಿಚಯಿಸಲಿದೆ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು. ಪ್ರಮುಖವಾಗಿ ಮಾರುಟ್ಟೆಯಲ್ಲಿ ಲಗ್ಗೆ ಇಡುತ್ತಿರುವ ಖಾಸಗಿ ಕಂಪನಿಗಳ ಕ್ರಿಪ್ಟೊಕರೆನ್ಸಿಗೆ ಪೂರ್ಣ ಅಂಕುಶ ಹಾಕಬೇಕಿದೆ.
ಬಾಯಾರಿದ ಎಮ್ಮೆ ಬೋರ್ ವೆಲ್ ನಿಂದ ನೀರು ಹೇಗೆ ಕುಡಿದಿದೆ ಗೊತ್ತಾ..?
ಹಾಗಿದ್ದರೆ ಸದ್ಯ ಕ್ರಿಪ್ಟೊಕರೆನ್ಸಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಬಿಟ್‌ಕಾಯಿನ್‌ಗೆ ಸವಾಲೊಡ್ಡುವಂಥ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಆರ್.ಬಿ.ಐ.ನಿಂದ ಹೊರಬರುವುದು ಯಾವಾಗ ಎನ್ನುವ ನಿರೀಕ್ಷೆ ಬಹಳ ಹೆಚ್ಚಾಗುತ್ತಲೇ ಇದೆ. ಸಿಬಿಡಿಸಿ ಕ್ರಿಪ್ಟೊಕರೆನ್ಸಿಗಿಂತಲೂ ಸ್ಥಿರ ಹಾಗೂ ಸುರಕ್ಷಿತ. ಯಾಕೆಂದರೆ ಸರಕಾರ, ಬ್ಯಾಂಕ್‌ಗಳ ನಿಯಂತ್ರಣದಲ್ಲಿ ಸಿಬಿಡಿಸಿ ಇರಲಿದೆ. ಇದರಲ್ಲಿನ ಹೂಡಿಕೆಗೆ ಖಾತರಿ ಸಿಗಲಿದೆ. ಹೀಗಾದಲ್ಲಿ ಇಡೀ ವಿಶ್ವದಲ್ಲೇ ಮೊದಲ ಸ್ವಂತದ್ದಾದ ಡಿಜಿಟಲ್ ಕಾಯಿನ್ ಪರಿಚಯಿಸಿದ ಕೀರ್ತಿ ಭಾರತದ್ದಾಗಲಿದೆ.