ಐಷಾರಾಮಿ ಹಡಗಿನಲ್ಲಿ ಪಾರ್ಟಿ ನಡೆಸುತ್ತಿದ್ದ 23 ವರ್ಷದ ಆರ್ಯನ್ ಖಾನ್ ಮತ್ತು ಆತನ ಸ್ನೇಹಿತರು ಡ್ರಗ್ಸ್ ಸೇವಿಸುತ್ತಿದ್ದ ಹಿನ್ನೆಲೆಯಲ್ಲಿ ಎನ್ಸಿಬಿ ಅಧಿಕಾರಿಗಳು ಅಕ್ಟೋಬರ್ 3ರಂದು ಆರ್ಯನ್ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದಿದ್ದರು. ಅಕ್ಟೋಬರ್ 8ನೇ ತಾರೀಖಿನಂದು ಆರ್ಯನ್ ಖಾನ್ನನ್ನು ಬಂಧಿಸಲಾಗಿತ್ತು. ಪ್ರಸ್ತುತ ಆರ್ಯನ್ ಖಾನ್ನನ್ನು ಎನ್ಸಿಬಿ ಅಧಿಕಾರಿಗಳು ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಿದ್ದರು.
ಆರ್ಯನ್ ಖಾನ್ ಪರ ಬಾಂಬೆ ಹೈಕೋರ್ಟ್ನಲ್ಲಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ಆರ್ಯನ್ ಖಾನ್ರನ್ನು ಬಂಧಿಸಲು ಎನ್ಸಿಬಿ ಯಾವುದೇ ಸೂಕ್ತ ಕಾರಣಗಳನ್ನು ನೀಡಿಲ್ಲ. ಬಂಧನಕ್ಕೆ ಮುನ್ನ ಕಾರಣಗಳನ್ನು ತಿಳಿಸಬೇಕಾದ್ದು ಎನ್ಸಿಬಿ ಕರ್ತವ್ಯವಾಗಿದೆ. ಆದರೆ ಎನ್ಸಿಬಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ ಎಂದು ಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಆರೋಪಿಗಳ ಪರವಾಗಿ ಅಮಿತ್ ದೇಸಾಯಿ ಹಾಗೂ ಕಾಶಿಫ್ ಖಾನ್ ಕೂಡ ವಾದ ಮಂಡಿಸಿದ್ದರು. ಎನ್ಸಿಬಿ ಪರವಾಗಿ ವಕೀಲ ಎನ್ಎಸ್ಜಿ ಅನಿಲ್ ಸಿಂಗ್ ಹಾಜರಾಗಿದ್ದರು.
ಎನ್ಸಿಬಿ ಹಾಗೂ ಆರೋಪಿಗಳ ಪರ ವಕೀಲರ ವಾದ ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ನೇತೃತ್ವದ ಏಕ ಸದಸ್ಯ ಪೀಠ ಆರ್ಯನ್ ಖಾನ್ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.