
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, 2ನೇ ತರಗತಿಯ ಬಾಲಕಿಗೆ ಇತರ ವಿದ್ಯಾರ್ಥಿಗಳ ಮುಂದೆ ಕೂದಲು ಎಳೆದು ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯನ್ನು ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇದೀಗ ಆರೋಪಿ ಶಿಕ್ಷಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಕನಿಂದ ತಪ್ಪಿಸಿಕೊಳ್ಳಲು ಕುರ್ಚಿಗಳ ಹಿಂದೆ ಹೋಗಲು ಪ್ರಯತ್ನಿಸುತ್ತಿರುವಾಗ ಅವಳ ಕೂದಲು ಹಿಡಿದು ಎಳೆದುಕೊಂಡು ಬಂದು ಹೊಡೆಯುತ್ತಾನೆ. ಮಗು ನೋವಿನಿಂದ ಅಳುತ್ತಿದ್ದರೂ ಶಿಕ್ಷಕ ಮಗುವಿಗೆ ಥಳಿಸುತ್ತಲೇ ಇದ್ದ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಗುವಿಗೆ ಥಳಿಸಿದ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
कन्नौज : कोचिंग टीचर द्वारा मासूम बच्ची को तालिबानी सजा
➡मासूम को बाल पकड़ कर खींचने के बाद ,डंडे से पीटा
➡पिटाई का वीडियो सोशल मिडिया में जमकर वायरल
➡कक्षा 2 की छात्रा से पढ़ाई के दौरान नाराज टीचर ने पीटा
➡सौरिख थाना क्षेत्र के खड़िनी क्षेत्र का बताया जा रहा वीडियो.… pic.twitter.com/EEjTgUBy3i
— भारत समाचार | Bharat Samachar (@bstvlive) November 26, 2024