ಕಳೆದ ವಾರ ಛತ್ತೀಸ್ ಘಡದ ಬಸ್ತಾರ್ -ಬಿಜಾಪುರದಲ್ಲಿ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡ ಸಿಆರ್ಪಿಎಫ್ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡಲಾಗಿದೆ.
ಮಾವೋವಾದಿಗಳ ಸೆರೆಯಲ್ಲಿ ಐದು ದಿನಗಳ ಕಾಲ ಇದ್ದ ರಾಕೇಶ್ವರ್ ಸಿಂಗ್ ಬಿಡುಗಡೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ತಾರ್ –ಬಿಜಾಪುರ ದಂಡಕಾರಣ್ಯ ಪ್ರದೇಶದಲ್ಲಿ ನಕ್ಸಲರು, ಯೋಧರೊಂದಿಗೆ ನಡೆದ ಗುಂಡಿನ ಕಾಳಗದ ವೇಳೆ ರಾಕೇಶ್ವರ್ ಸಿಂಗ್ ಅವರನ್ನು ಅಪಹರಿಸಲಾಗಿತ್ತು. ಸ್ಥಳೀಯ ಪತ್ರಕರ್ತರು ಸೇರಿದಂತೆ 11 ಮಂದಿ ಸದಸ್ಯರ ತಂಡ ಮಾವೋವಾದಿಗಳ ಜೊತೆ ನಿರಂತರವಾಗಿ ಮಾತುಕತೆ ನಡೆಸಿ ರಾಕೇಶ್ವರ್ ಸಿಂಗ್ ಅವರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.