ಬೆಂಗಳೂರು : ಬೆಂಗಳೂರು ಕಂಬಳಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಕೋಣಗಳ ಮಿಂಚಿನ ಓಟ ವೀಕ್ಷಿಸಿ ಜನರು ಫುಲ್ ಖುಷ್ ಆಗಿದ್ದಾರೆ.
ಸಂಪ್ರದಾಯದಂತೆ ಕಂಬಳ ಕೆರೆಗೆ ಕೋಣಗಳು ಇಳಿದಿದ್ದು, ಕಂಬಳ ಸಮಿತಿಯಿಂದ ಕೋಣದ ಮಾಲೀಕರಿಗೆ ಗೌರವಿಸಲಾಗಿದೆ. ಸಂಪ್ರದಾಯದಂತೆ ಶಾಲು ಹೊದಿಸಿ ಎಳನೀರು, ತಾಂಬೂಲ ನೀಡಿ ಗೌರವಿಸಲಾಯಿತು. ಓಟಗಾರರು ಕಂಬಳ ಕೆರೆಗೆ ಸಮಸ್ಕರಿಸಿ ಇಳಿದರು. ಬೆಂಗಳೂರು ಮಾತ್ರವಲ್ಲದೇ ಕರಾವಳಿ ಭಾಗದ ಸಾಕಷ್ಟು ಮಂದಿ ಅಭಿಮಾನಿಗಳು ಆಗಮಿಸಿ ಕಂಬಳ ವೀಕ್ಷಿಸಿದ್ದಾರೆ. ಶಿಳ್ಳೆ, ಚಪ್ಪಾಳೆಯಿಂದ ಓಟಗಾರರನ್ನು ಹುರಿದುಂಬಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಟ್ರಯಲ್ ಆಗಿ ಕೋಣಗಳನ್ನು ಓಡಿಸಲಾಗಿದ್ದು, ಸಂಜೆ ವೇಳೆಗೆ ರೋಚಕ ಫೈಟ್ ನಡೆಯಲಿದೆ.
ಬೆಂಗಳೂರು ಕಂಬಳ ಕೆರೆಯ ಬಗ್ಗೆ ಕಂಬಳ ಓಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಂಬಳ ಗದ್ದೆ ಬಹಳ ಮೆದುವಾಗಿದೆ. ಓಡುವುದಕ್ಕೆ ಯಾವುದೇ ತೊಂದ್ರೆ ಇಲ್ಲ. ಕೋಣಗಳು ಸಹ ಒಳ್ಳೆ ರೆಸ್ಪಾನ್ಸ್ ಮಾಡ್ತಿದೆ ಎಂದಿದ್ದಾರೆ.