![](https://kannadadunia.com/wp-content/uploads/2022/07/1600x960_1131185-farmers.jpg)
ಬೆಂಗಳೂರು: ಫಸಲ್ ಬಿಮಾ ಯೋಜನೆಗೆ ಸರ್ಕಾರಿ ವಿಮಾ ಕಂಪನಿ ಸೇರಿಸಲು ಸಲಹೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಖಾಸಗಿ ಕಂಪನಿಗಳು ಫಸಲ್ ಬಿಮಾ ಯೋಜನೆಯ ಲಾಭವನ್ನು ಲೂಟಿ ಮಾಡುವುದನ್ನು ತಪ್ಪಿಸಲು ಸರ್ಕಾರಿ ವಿಮಾ ಕಂಪನಿ ಸೇರಿಸಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ.
ಖಾಸಗಿ ಕಂಪನಿಗಳು ಫಸಲ್ ಬಿಮಾ ಯೋಜನೆಯ ಲಾಭ ಲೂಟಿ ಮಾಡುತ್ತಿವೆ. ರೈತರಿಗೆ ಸರಿಯಾಗಿ ಬೆಳೆ ನಷ್ಟದ ವಿಮೆ ದೊರೆಯುತ್ತಿಲ್ಲ. ಹೀಗಾಗಿ ಸರ್ಕಾರಿ ವಿಮಾ ಕಂಪನಿಗಳು ಈ ಯೋಜನೆ ಅಡಿ ಸೇರಿಸಬೇಕು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಕೇಳಿ ಬಂದಿದೆ.