ರಾಯಚೂರು: ದನಗಳ ಮೈ ತೊಳೆಯಲೆಂದು ಕೆರೆಗೆ ಹೋಗಿದ್ದ ರೈತರಿಬ್ಬರ ಮೇಲೆ ಮೊಸಳೆ ದಾಳಿ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಸರ್ಜಾಪುರದಲ್ಲಿ ನಡೆದಿದೆ.
ಮಹಾನಂದ ಮೊಸಳೆ ದಾಳಿಯಿಂದ ಗಾಯಗೊಂಡಿರುವ ರೈತ. ಎತ್ತುಗಳ ಮೈ ತೊಳೆಯಲೆಂದು ಮಹಾನಂದ ಕೆರೆಗೆ ಹೋಗಿದ್ದರು. ಈ ವೇಳೆ ಏಕಾಎಕಿ ಮೊಸಳೆ ದಾಳಿ ನಡೆಸಿದೆ. ರೈತನ ಬಲಗಾಲಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳು ರೈತನನ್ನು ರಾಯಚೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ಸಹಾಯದಿಂದ ಮೊಸಳೆ ಸೆರೆ ಹಿಡಿದಿದ್ದಾರೆ.