ಕಾಸರಗೋಡು : ಬಬಿಯಾ ಮೊಸಳೆ ಅಸುನೀಗಿದ ನಂತರ ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದ್ದು, ಭಕ್ತಾದಿಗಳಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ ಪುರಾಣ ಪ್ರಸಿದ್ಧ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ದೇವರ ಮೊಸಳೆ ಎಂದೇ ಖ್ಯಾತಿ ಪಡೆದದ್ದ ಬಬಿಯಾ ಮೊಸಳೆ ಇತ್ತೀಚೆಗೆ ಮೃತಪಟ್ಟಿತ್ತು. 13 ತಿಂಗಳ ಬಳಿಕ ಮತ್ತೊಂದು ಮೊಸಳೆ ಅನಂತಪುರ ಕ್ಷೇತ್ರದ ಕೆರೆಯಲ್ಲಿ ಪತ್ತೆಯಾಗಿದ್ದು, ಮರಿ ಬಬಿಯಾ ಬಂದಿದೆ. ಇದು ಪವಾಡವೋ ಕಾರಣಿಕ ಶಕ್ತಿಯೋ!? ಎಂದು ಭಕ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನದಿಯ ಮಧ್ಯಭಾಗದಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದ್ದು ಬಬಿಯಾ ಹೆಸರಿನ ಮೊಸಳೆ ಅದೇ ನದಿಯಲ್ಲಿ ಹಲವಾರು ವರ್ಷಗಳಿಂದ ವಾಸವಾಗಿತ್ತು, . ನಂತರ ದೇಗುಲದ ಗರ್ಭಗುಡಿಗೆ ಪ್ರತಿನಿತ್ಯ ಬಂದು ಪ್ರಸಾದ ಸೇವಿಸಿ ಹೋಗುತ್ತಿತ್ತು, ಇದು ಭಕ್ತರಲ್ಲಿ ಬಹಳ ಅಚ್ಚರಿ ಮೂಡಿಸಿತ್ತು.
ಬಬಿಯಾನನ್ನ ದೇವರ ಮೊಸಳೆ ಎಂದೇ ಸ್ಥಳೀಯರು ನಂಬಿದ್ದರು. ಈ ದೇವಸ್ಥಾನದಲ್ಲಿ ದೇವರಿಗೆ ನೈವೇದ್ಯ ನೀಡೋದ್ರ ಜೊತೆಗೆ ಬಬಿಯಾಗೂ ನಿತ್ಯ ನೇವೈದ್ಯ ಸಮರ್ಪಣೆ ಮಾಡಲಾಗುತಿತ್ತು. 2022 ರ ಅಕ್ಟೋಬರ್ ನಲ್ಲಿ ಬಬಿಯಾ ಮೊಸಳೆ ಅಸುನೀಗಿತ್ತು. ಇದೀಗ ಅನಂತಪುರ ಕ್ಷೇತ್ರದ ಕೆರೆಯಲ್ಲಿ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದೆ.
ಸರೋವರ ಕ್ಷೇತ್ರ ಕುಂಬಳೆ ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮತ್ತೆ ಹೊಸ ಮೊಸಳೆ ಪ್ರತ್ಯಕ್ಷ ಆಗಿದೆ ,ಹಿಂದೆ ಬ್ರಿಟಿಷ್ ಆಫೀಸರ್ ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಅಲ್ಲಿದ್ದ ಮೊಸಳೆ ಕೊಂದಿದ್ದ ಆಮೇಲೆ ಕೆಲ ಸಮಯದ ನಂತರ ಬಬಿಯಾ ಎಂಬ ಮೊಸಳೆ ಪ್ರತ್ಯಕ್ಷ ಆಗಿ ನೈವೇದ್ಯ ಸ್ವೀಕರಿಸುತ್ತಿತ್ತು ,ದಿನಾಂಕ 9/10/22ರಂದು ಬಬಿಯಾ ತೀರಿದ ಒಂದು ವರ್ಷದ ಮೇಲೆ ಅಂದರೆ 10/11/2023ರಂದು ಹೊಸ ಮೊಸಳೆ ಕಾಣಿಸಿಕೊಂಡಿದೆ ಎಂದು ನೆಟ್ಟಿಗರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.