
ರಾಯಚೂರು: ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲಾದ ಘಟನೆ ರಾಯಚೂರು ತಾಲ್ಲೂಕಿನ ಡೊಂಗರಾಂಪುರ ಗ್ರಾಮದ ಬಳಿ ನಡೆದಿದೆ.
ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದ 12 ವರ್ಷದ ಮಲ್ಲಿಕಾರ್ಜುನ ಎಂಬ ಬಾಲಕನ ಮೇಲೆ ದಾಳಿ ಮಾಡಿದ ಮೊಸಳೆ ದೇಹದ ಭಾಗವನ್ನು ತಿಂದಿದೆ.
ವಿದ್ಯಾಗಮ ಯೋಜನೆ ನಿಲ್ಲಿಸಿದ್ದರಿಂದ ಬಾಲಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆ ದನ ಕಾಯಲು ಹೊಲಕ್ಕೆ ಹೋಗಿ ಮಧ್ಯಾಹ್ನ ಊಟದ ಬಳಿಕ ನೀರು ಕುಡಿಯಲು ನದಿಗೆ ಇಳಿದಾಗ ಈ ಘಟನೆ ನಡೆದಿದೆ. ರಾತ್ರಿ ನದಿಯ ಬಳಿ ಬಾಲಕನ ತಲೆ ಭಾಗ ಕಂಡು ಬಂದಿದೆ. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.