
ಕಲಬುರಗಿ: ನೀರು ಕುಡಿಯಲು ನದಿಗೆ ಇಳಿದಿದ್ದ ಯುವಕನ ಮೇಲೆ ಮೊಸಳೆ ದಾಳಿ ಮಾಡಿದ್ದು, ಇದರಿಂದಾಗಿ ಯುವಕನ ಕೈ ತುಂಡಾದ ಘಟನೆ ಸೋಮವಾರ ವಡಗೇರಾ ತಾಲೂಕಿನ ಶಿವಪುರ ಗ್ರಾಮದ ಸಮೀಪ ಕೃಷ್ಣಾ ನದಿ ದಂಡೆಯಲ್ಲಿ ನಡೆದಿದೆ.
ಭೀಮಾಶಂಕರ್ ಕೈ ಕಳೆದುಕೊಂಡ ದುರ್ದೈವಿ. ಶಿವಪುರ ಗ್ರಾಮದ ಬಳಿ ಕೃಷ್ಣಾ ನದಿ ದಂಡೆ ಮೇಲೆ ಮೇಕೆ ಮತ್ತು ಹಸುಗಳನ್ನು ಮೇಯಿಸಲು ಹೋಗಿದ್ದ ಭೀಮಾಶಂಕರ ನೀರು ಕುಡಿಯಲು ನದಿಗೆ ಇಳಿದಿದ್ದಾರೆ. ನೀರು ಕುಡಿಯುತ್ತಿದ್ದ ಅವರ ಮೇಲೆ ಏಕಾಏಕಿ ಮೊಸಳೆ ದಾಳಿ ಮಾಡಿದ್ದು, ಇದರಿಂದಾಗಿ ಅವರ ಬಲಗೈ ತುಂಡಾಗಿದೆ. ದೇಹದ ತುಂಬ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.