ರೊನಾಲ್ಡೋ ‘ಕೋಕ್’ ಬಾಟಲಿ ಘಟನೆ ಬಳಿಕ ಈ ಜಾಹೀರಾತು ವೈರಲ್…! 18-06-2021 3:16PM IST / No Comments / Posted In: Latest News, Live News, Sports ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಪತ್ರಿಕಾಗೋಷ್ಠಿಯಲ್ಲಿ ಕೊಕೋ ಕೋಲಾ ಬಾಟಲಿಗಳನ್ನ ಪಕ್ಕಕ್ಕೆ ಸರಿಸಿ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದರು. ಹಂಗೇರಿ ವಿರುದ್ಧದ ಯುರೋ 2020 ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರೊನಾಲ್ಡೋ ತಮ್ಮ ಮೇಜಿನ ಮೇಲಿದ್ದ ಎರಡು ಕೋಕ್ ಬಾಟಲಿಗಳನ್ನ ಪಕ್ಕಕ್ಕೆ ಸರಿಸಿದ್ದರು. ಅಲ್ಲದೇ ಅಲ್ಲೇ ಇದ್ದ ನೀರು ಬಾಟಲಿಯನ್ನ ತೋರಿಸಿ ನೀರನ್ನ ಕುಡಿಯಿರಿ ಎಂದು ಸಲಹೆ ನೀಡಿದ್ದರು. ಕ್ರಿಸ್ಟಿಯಾನೋ ರೋನಾಲ್ಡೋರ ಈ ನಡವಳಿಕೆಯಿಂದಾಗಿ ಕೋಕ್ ಮಾರುಕಟ್ಟೆಗೆ ಬರೋಬ್ಬರಿ 4 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ..! ಫುಟ್ಬಾಲ್ ಆಟಗಾರ ಸಮಾಜದ ಸ್ವಾಸ್ಥ್ಯವನ್ನ ಕಾಪಾಡುವ ನಿಟ್ಟಿನಲ್ಲಿ ನೀಡಿದ ಈ ಸಲಹೆಯನ್ನ ಜನತೆ ಬಹುಬೇಗನೆ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಈ ನಡುವೆ ರೊನಾಲ್ಡೋ ಬರೋಬ್ಬರಿ 10 ವರ್ಷಗಳ ಹಿಂದೆ ಮಾಡಿದ ಜಾಹಿರಾತೊಂದು ಇದೀಗ ಮುನ್ನಲೆಗೆ ಬರ್ತಿದೆ. ಕೋಲಾ ಜಾಹಿರಾತಿನಲ್ಲಿ ಸ್ವತಃ ರೋನಾಲ್ಡೋ ಕಾಣಿಸಿಕೊಂಡಿದ್ದು 10 ವರ್ಷಗಳ ಬಳಿಕ ರೊನಾಲ್ಡೋ ಯಾಕೆ ತಮ್ಮ ಮಾತನ್ನ ಬದಲಾಯಿಸಿದ್ರು ಎಂದು ಟ್ವೀಟಿಗರು ಆಡಿಕೊಳ್ತಿದ್ದಾರೆ . https://youtu.be/sGQ0BX3j8_E?t=42 Hey google , what's does a HYPOCRITE mean ? #Ronaldo #CocaCola pic.twitter.com/KSNCDGAci5 — Space-Monkey🍥 (@iamyeshwa) June 16, 2021 Wonder how much @CocaCola paid for that to be placed there https://t.co/b7G6IAbZp4 — Stephen Scullion OLY (@scullion262) June 15, 2021 I wonder how much he got paid to advertise coke in Asia!! https://t.co/FipxfUx1kA — Shane R (@ShaneRooD15) June 16, 2021