ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಮ್ಮೆ ತಂದೆಯಾಗಲು ರೆಡಿಯಾಗಿದ್ದಾರೆ..! ಈ ಸಂತೋಷದ ವಿಚಾರವನ್ನು ಕ್ರಿಸ್ಟಿಯಾನೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೋರ ಗೆಳತಿ ಜಾರ್ಜಿಯಾ ರೋಡ್ರಿಗ್ರಿಸ್ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ. ಮಗುವಿನ ಸ್ಕ್ಯಾನಿಂಗ್ ರಿಪೋರ್ಟ್ ಫೋಟೋದ ಜೊತೆ ಕ್ರಿಸ್ಟಿಯಾನೋ ಹಾಗೂ ಜಾರ್ಜಿಯಾ ರೊಡ್ರಿಗ್ರಿಸ್ ಪೋಸ್ ನೀಡಿದ್ದಾರೆ.
ನಾವು ಅವಳಿ ಮಕ್ಕಳಿಗೆ ಪೋಷಕರಾಗುತ್ತಿದ್ದೇವೆ ಎಂದು ಘೋಷಣೆ ಮಾಡುತ್ತಿರೋದಕ್ಕೆ ಖುಷಿಯಾಗುತ್ತಿದೆ. ನಮ್ಮ ಹೃದಯದಲ್ಲಿ ಪ್ರೀತಿ ತುಂಬಿದೆ – ನಿಮ್ಮಿಬ್ಬರನ್ನು ಭೇಟಿಯಾಗಲು ಕಾಯುತ್ತಿದ್ದೇವೆ ಎಂದು ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಕ್ರಿಸ್ಟಿಯಾನೋ ಈ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಸುರಿಸುತ್ತಿದ್ದಾರೆ.
ಮದುವೆಯಾಗದೇ ಇದ್ದರೂ ಸಹ ಕ್ರಿಸ್ಟಿಯಾನೋ ರೋನಾಲ್ಡೋ ಈಗಾಗಲೇ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋಗೆ ಜ್ಯೂನಿಯರ್, ಅವಳಿ ಮಕ್ಕಳಾದ ಈವಾ ಹಾಗೂ ಮ್ಯಾಟೋ ಮತ್ತು ಅಲಾನಾ ಮಾರ್ಟಿನಾ ನಾಲ್ವರು ಮಕ್ಕಳಾಗಿದ್ದಾರೆ. ಇದೀಗ ರೊನಾಲ್ಡೋ ಮತ್ತೆ ಅವಳಿ ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ.ಈ ಮೂಲಕ ಒಟ್ಟು ಆರು ಮಕ್ಕಳಿಗೆ ಕ್ರಿಸ್ಟಿಯಾನೋ ತಂದೆ ಎನಿಸಿಕೊಳ್ಳಲಿದ್ದಾರೆ.