ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇನ್ಸ್ಟಾಗ್ರಾಂನಲ್ಲಿ 600 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಸತತ ಮೂರನೇ ವರ್ಷವೂ ಇನ್ಸ್ಟಾಗ್ರಾಂನ ಟಾಪ್ ಗಳಿಕೆದಾರ ಎಂದು ಹೆಸರಿಸಲ್ಪಟ್ಟರು. 38 ವರ್ಷದ ಪೋರ್ಚುಗಲ್ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೊ, ಸಾಮಾಜಿಕ ಮಾಧ್ಯಮದಲ್ಲಿ 300 ಮಿಲಿಯನ್ ದಾಟಿದ ಮೊದಲ ವ್ಯಕ್ತಿ ಎಂದೇ ಖ್ಯಾತಿ ಪಡೆದಿದ್ದಾರೆ.
2017 ರಿಂದ ಮೊದಲ ಬಾರಿಗೆ ಫೋರ್ಬ್ಸ್‌ನಿಂದ ಜುಲೈನಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂದು ಶ್ರೇಯಾಂಕ ಪಡೆದ ರೊನಾಲ್ಡೊ, 2023ರ ಇನ್ಸ್ಟಾಗ್ರಾಂ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ರೊನಾಲ್ಡೊ ಪ್ರತಿ ಇನ್ಸ್ಟಾಗ್ರಾಂ ಪೋಸ್ಟ್‌ಗೆ ಡಾಲರ್ 3.23 ಮಿಲಿಯನ್ ಪಡೆಯುತ್ತಾರೆ. ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 600 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮೂಲಕ ಹೊಸ ದಾಖಲೆಗೆ ಅವರು ಪಾತ್ರರಾಗಿದ್ದಾರೆ.
ರೊನಾಲ್ಡೊ ಹತ್ತಿರದ ಪ್ರತಿಸ್ಪರ್ಧಿ ಅರ್ಜೆಂಟೀನಾ ವಿಶ್ವಕಪ್ ವಿಜೇತ ಲಿಯೋನೆಲ್ ಮೆಸ್ಸಿ, ಪ್ರತಿ ಪೋಸ್ಟ್‌ಗೆ ಸುಮಾರು ಡಾಲರ್ 2.6 ಮಿಲಿಯನ್ ಪಡೆಯುತ್ತಾರೆ.
ಅಂದಹಾಗೆ, ಜೂನ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ 200 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ಪುರುಷರ ಆಟಗಾರರಾದರು. ಅಲ್ಲದೆ, ಯುರೋಪಿಯನ್ ಚಾಂಪಿಯನ್‌ಶಿಪ್ ಅರ್ಹತಾ ಪಂದ್ಯದಲ್ಲಿ ಪೋರ್ಚುಗಲ್ ಐಸ್‌ಲ್ಯಾಂಡ್ ಅನ್ನು ಸೋಲಿಸಿ 89ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸುವ ಮೂಲಕ ಮೈಲಿಗಲ್ಲನ್ನು ಆಚರಿಸಿದ್ರು.