alex Certify Video: ಹಾಡಹಗಲೇ ಗನ್ ತೋರಿಸಿ ಯುವತಿ ಎಳೆದೊಯ್ದ ದುಷ್ಕರ್ಮಿಗಳು; ಅಂಗಲಾಚಿದರೂ ಸಹಾಯಕ್ಕೆ ಬರಲಿಲ್ಲ ಯಾರೂ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video: ಹಾಡಹಗಲೇ ಗನ್ ತೋರಿಸಿ ಯುವತಿ ಎಳೆದೊಯ್ದ ದುಷ್ಕರ್ಮಿಗಳು; ಅಂಗಲಾಚಿದರೂ ಸಹಾಯಕ್ಕೆ ಬರಲಿಲ್ಲ ಯಾರೂ….!

Chor de, Chor de.Woman dragged at gunpoint in Prayagraj by assailants, bystanders watch helplessly

 

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ಹಾಡಹಗಲೇ ದುಷ್ಕರ್ಮಿಗಳು ಮಹಿಳೆಯೊಬ್ಬಳನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಸಾರ್ವಜನಿಕರ ಕಣ್ಣೆದುರಲ್ಲೇ ಈ ಕ್ರೌರ್ಯ ನಡೆದುಹೋಗಿದೆ.

ಕೈಯ್ಯಲ್ಲಿ ಗನ್‌ ಹಾಗೂ ದೊಣ್ಣೆ ಹಿಡಿದು ಬೆದರಿಸಿದ ದುಷ್ಕರ್ಮಿಗಳು ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾರೆ. ಘಟನೆಯಿಂದ ಅಕ್ಷರಶಃ ತತ್ತರಿಸಿದ್ದ ಮಹಿಳೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು. ತನ್ನನ್ನು ಬಿಟ್ಟುಬಿಡುವಂತೆ ಕಣ್ಣೀರಿಟ್ಟಿದ್ದಾಳೆ. ಆದರೆ ಮಹಿಳೆಯದ್ದು ಅರಣ್ಯ ರೋದನವಾಗಿಬಿಟ್ಟಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಸಹ ವೈರಲ್‌ ಆಗಿದೆ. ಮಹಿಳೆಯ ಕೂದಲನ್ನು ಹಿಡಿದು ದುಷ್ಕರ್ಮಿಗಳು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಭಯಾನಕವಾಗಿದೆ. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಸಾರ್ವಜನಿಕರನ್ನು ಬಂದೂಕು ತೋರಿಸಿ ದುಷ್ಕರ್ಮಿಗಳು ಬೆದರಿಸಿದ್ದಾರೆ. ಅಷ್ಟೇ ಅಲ್ಲ ದೊಣ್ಣೆಗಳನ್ನೂ ಝಳಪಿಸಿದ್ದಾರೆ. ಘಟನೆಯಿಂದ ಆಘಾತಗೊಂಡ ವೃದ್ಧೆಯೊಬ್ಬಳು ಸಹಾಯ ಮಾಡುವಂತೆ ಅಂಗಲಾಚುತ್ತಿರುವ ದೃಶ್ಯ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ.

ದುಷ್ಕರ್ಮಿಗಳ ಬಂದೂಕಿಗೆ ಹೆದರಿದ ಸಾರ್ವಜನಿಕರು ಮಹಿಳೆಯ ರಕ್ಷಣೆಗೆ ಮುಂದಾಗಿಲ್ಲ. ಕೇವಲ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಈ ಘಟನೆಯು ಪ್ರಯಾಗ್‌ರಾಜ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...