ಬೆಂಗಳೂರು: ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ಮೇಲೆ ಇರುವ ಪ್ರಕರಣಗಳು, ದೂರುಗಳ ಬಗ್ಗೆ ಪ್ರಚುರಪಡಿಸುವುದು ಕಡ್ಡಾಯವಾಗಿದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಅಭ್ಯರ್ಥಿಗಳು ತಮ್ಮ ಹುಳುಕುಗಳನ್ನು ಮರೆಮಾಚಿ ಮತದಾರರನ್ನು ವಂಚಿಸುವಂತಿಲ್ಲ. ತಮ್ಮ ಕ್ರಿಮಿನಲ್ ಹಿನ್ನೆಲೆಯನ್ನು ಪ್ರಚುರಪಡಿಸಬೇಕಿದೆ. ನಾಮಪತ್ರ ಹಿಂಪಡೆದುಕೊಂಡ 4 ದಿನಗಳ ಒಳಗೆ ಇಲ್ಲವೇ ಐದರಿಂದ ಎಂಟು ದಿನಗಳ ಒಳಗೆ ಮತದಾರರಿಗೆ ಮಾಹಿತಿ ನೀಡಬೇಕು. ಬಹಿರಂಗ ಪ್ರಚಾರ ಕೊನೆಗೊಳ್ಳುವ ಒಂದು ದಿನ ಮೊದಲು ರಾಜ್ಯಮಟ್ಟದ ಇಲ್ಲವೇ ಪ್ರಾದೇಶಿಕ ಪತ್ರಿಕೆಗಳಲ್ಲಿ ತಮ್ಮ ಮೇಲಿನ ಪ್ರಕರಣಗಳು ಮತ್ತು ಅದಕ್ಕೆ ಕಾರಣ ಸದ್ಯದ ಸ್ಥಿತಿಗತಿಗಳ ಬಗ್ಗೆ ಜಾಹೀರಾತು ಮಾದರಿಯಲ್ಲಿ ವಿವರಣೆ ನೀಡಬೇಕಿದೆ. ಅಭ್ಯರ್ಥಿಗಳು ಜಾಹೀರಾತು ಮಾದರಿಯಲ್ಲಿ ಪ್ರಚಾರ ನೀಡಿದ ಬಗ್ಗೆ ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ಸಮೇತ ವಿವರಣೆ ನೀಡಬೇಕು. ಇಲ್ಲವಾದಲ್ಲಿ ಯಾರಾದರೂ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ಮೇಲೆ ದಾಖಲಾದ ಕ್ರಿಮಿನಲ್ ಪ್ರಕರಣ, ಪಕ್ಷಗಳು ಟಿಕೆಟ್ ನೀಡಲು ಕಾರಣ ಏನೆಂಬ ಮಾಹಿತಿಯನ್ನು ಮತದಾನಕ್ಕೆ ಮೊದಲು ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಮಾಡಿಕೊಳ್ಳಬೇಕಿದೆ. ಮತದಾರರಿಗೆ ತಿಳಿಸುವುದು ಮಾತ್ರವಲ್ಲ, ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದೆ. ಇಂತಹ ಅಭ್ಯರ್ಥಿಗಳಿಗೆ ಪಕ್ಷಗಳು ಕೂಡ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.