
ಮೈಸೂರು: ಕ್ರೈಂ ಬ್ರ್ಯಾಂಚ್ ಪೊಲೀಸರ ಹೆಸರಲ್ಲಿ ವ್ಯಕ್ತಿಯೋರ್ವ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಮಧುವನಹಳ್ಳಿ ನಿವಾಸಿ ದಿವ್ಯರಾಜ್ ಬಂಧಿತ ಆರೋಪಿ. ಈತ ತಾನೊಬ್ಬ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹೇಳಿಕೊಂಡು ಜನರಿಗೆ ಬೆದರಿಸಿ ಹಣ ಪಡೆಯುತ್ತಿದ್ದ.
ಆಯುರ್ವೇದಿಕ್ ಸ್ಪಾ ಮಾಲೀಕ ಪುಷ್ಪ ಕುಮಾರ್ ಎಂಬುವವರ ಬಳಿಯೂ ಕ್ರೈಂ ಬ್ರ್ಯಾಂಚ್ ಪೊಲೀಸ್ ಎಂದು ಹಣ ವಸೂಲಿಗೆ ಇಳಿದಿದ್ದಾನೆ. ಅನುಮಾನಗೊಂಡ ಪುಷ್ಪ ಕುಮಾರ್, ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಆರೋಪಿ ದಿವ್ಯರಾಜ್ ನನ್ನು ಬೈಲಕುಪ್ಪೆ ಪೊಲೀಸರು ಬಂಧಿಸಿದ್ದಾರೆ.