ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಶುಭ ಮನ್ ಗಿಲ್ ಇಂದು ತಮ್ಮ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಆರಂಭದಲ್ಲಿ ದೇಶಿಯ ಕ್ರಿಕೆಟ್ ನಲ್ಲಿ ಎಲ್ಲರ ಗಮನ ಸೆಳೆದಿದ್ದ ಶುಭಮನ್ ಗಿಲ್ ಅವರಿಗೆ 2018 ರಂದು ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಾಡುವ ಅವಕಾಶ ಸಿಕ್ಕಿತು. ಮಾರ್ಚ್ 31 2019ರಲ್ಲಿ ನಡೆದ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಣ ಏಕದಿನ ಪಂದ್ಯದಲ್ಲಿ ಆಯ್ಕೆಯಾದ ಇವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಬಳಿಕ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಶುಭಮನ್ ಗಿಲ್ ಭಾರತ ಹಾಗೂ ಶ್ರೀಲಂಕಾ ನಡುವಣ ಟಿ ಟ್ವೆಂಟಿ ಸರಣಿಯಲ್ಲಿ ತಮ್ಮ ಚೊಚ್ಚಲ ಟಿ 20 ಪಂದ್ಯವನ್ನಾಡಿದರು.ಶುಭಮನ್ ಗಿಲ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ 47 ಪಂದ್ಯಗಳನ್ನಾಡಿದ್ದು, 2328 ರನ್ ಬಾರಿಸಿದ್ದಾರೆ. ಇದರಲ್ಲಿ 13 ಅರ್ಧ ಶತಕ ಮತ್ತು 6 ಶತಕಗಳಿವೆ.
ಮೂರು ವರ್ಷಗಳ ಕಾಲ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಇವರನ್ನು 2022ರಂದು ಗುಜರಾತ್ ಟೈಟನ್ಸ್ ಅತಿ ಹೆಚ್ಚು ದುಬಾರಿ ಬಾರಿ ಬೆಲೆಗೆ ಖರೀದಿಸಿತು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗೆ ಮರಳಿರುವ ಕಾರಣ ಇದೀಗ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದಾರೆ. ಇಂದು ಹಲವಾರು ಕ್ರಿಕೆಟಿಗರು ಶುಭಮನ್ ಗಿಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.