
ಮಂಗಳೂರು: ಕ್ರಿಕೆಟ್ ಆಡುವಾಗ ಶಾಸಕ ಅಶೋಕ್ ಕುಮಾರ್ ರೈ ಜಾರಿ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಬಂಟರ ಸಂಘ ಆಯೋಜಿಸಿದ್ದ ಕ್ರಿಕೆಟ್ ಕ್ರಿಡಾಕೂಟದಲ್ಲಿ ಭಾಗವಹಿಸಿದ್ದ ಶಾಸಕರು, ಕ್ರಿಕೆಟ್ ಆಡುವಾಗ ಜಾರಿ ಬಿದ್ದಿದ್ದಾರೆ.
ತಕ್ಷಣ ಇತರ ಆಟಗಾರರು ಧಾವಿಸಿ, ಶಾಸಕ ಅಶೋಕ್ ಕುಮಾರ್ ಅವರನ್ನು ಮೇಲಕೆತ್ತಿದ್ದಾರೆ. ಶಾಸಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.