ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಮೂವರನ್ನು ಬಂಧಿಸಲಾಗಿದೆ. ಇವರ ತಂಡದವರು ಮ್ಯಾಚ್ ನಡೆಯುವ ಮೈದಾನದಲ್ಲಿ ಕುಳಿತುಕೊಂಡೇ ದಂಧೆ ನಡೆಸುತ್ತಿದ್ದರು. ದೇಶದ ವಿವಿಧ ಕಡೆ ಸಹಚರರನ್ನು ಈ ಗ್ಯಾಂಗ್ ಹೊಂದಿದ್ದು, ಐಪಿಎಲ್ ಮ್ಯಾಚ್ ನಡೆಯುವ ಸಂದರ್ಭದಲ್ಲಿ ಸಹಚರರು ಮೈದಾನಕ್ಕೆ ಹೋಗಿ ಪ್ರತಿ ಬಾಲ್, ರನ್ ಬಗ್ಗೆ ಮೆಸೇಜ್ ಕಳುಹಿಸುತ್ತಿದ್ದರು. ಈ ಮಾಹಿತಿ ಆಧರಿಸಿ ಟಿವಿ ನೋಡಿಕೊಂಡು ಬೆಟ್ಟಿಂಗ್ ಆಡುತ್ತಿರುವವರನ್ನು ಸಂಪರ್ಕಿಸಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು.
ಮೈದಾನದಲ್ಲಿನ ಲೈವ್ ಮ್ಯಾಚ್ ಗೂ ಟಿವಿ ಲೈವ್ ಮ್ಯಾಚ್ ಗೂ 10 ಸೆಕೆಂಡ್ ಅಂತರವಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಈ ಗ್ಯಾಂಗ್ ವಂಚಿಸುತ್ತಿತ್ತು. ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.