ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ದಾಖಲೆ ಬರೆದಿದೆ.
ಲಂಡನ್‌ನ ಓವಲ್ ಮೈದಾನದಲ್ಲಿ ಟೀಂ ಇಂಡಿಯಾ 50 ವರ್ಷಗಳ ನಂತ್ರ ಗೆಲುವು ಸಾಧಿಸಿ, ದಾಖಲೆ ಬರೆದಿದೆ. ಬೌಲರ್ ಗಳ ಉತ್ತಮ ಪ್ರದರ್ಶನ, ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದೆ. ಇದರೊಂದಿಗೆ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ 157 ರನ್ ಗಳ ಗೆಲುವು ಸಾಧಿಸಿದೆ. ಟೀಂ ಇಂಡಿಯಾ, ಇಂಗ್ಲೆಂಡ್ ಗೆ 368 ರನ್ ಗಳ ಗುರಿ ನೀಡಿತ್ತು. ಆರಂಭದಲ್ಲಿ ಇಂಗ್ಲೆಂಡ್ ಮುನ್ನಡೆ ಕಾಯ್ದುಕೊಂಡಿತ್ತು. ಆದ್ರೆ ಇಂಗ್ಲೆಂಡ್ ಗೆ ಭಾರತೀಯ ಬೌಲರ್ ಗಳು ದುಬಾರಿಯಾದ್ರು. ಶಾರ್ದೂಲ್ ಠಾಕೂರ್ ಇಂಗ್ಲೆಂಡ್ಗೆ ಮೊದಲ ಹೊಡೆತ ನೀಡಿದರು. ಬುಮ್ರಾ ಮತ್ತು ಜಡೇಜಾ, ಇಂಗ್ಲೆಂಡ್ ಸೋಲಿಗೆ ಕಾರಣವಾದ್ರು. ಜಡೇಜಾ, ಬುಮ್ರಾ, ಶಾರ್ದೂಲ್ ತಲಾ 2-2 ವಿಕೆಟ್ ಪಡೆದರು. ಉಮೇಶ್ ಯಾದವ್ 3 ವಿಕೆಟ್ ಪಡೆದ್ರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ಫ್ಲಾಪ್ ಆಗಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಎಲ್ಲರೂ ಅದ್ಭುತ ಪ್ರದರ್ಶನ ನೀಡಿದ್ರು. ರೋಹಿತ್ ಶರ್ಮಾ 127 ರನ್ ಗಳ ಅದ್ಭುತ ಶತಕ ಸಿಡಿಸಿದ್ದರು. ಚೇತೇಶ್ವರ ಪೂಜಾರ 61 ರನ್ ಗಳಿಸಿದ್ರೆ, ರಿಷಭ್ ಪಂತ್ 50 ಹಾಗೂ ಶಾರ್ದೂಲ್ ಠಾಕೂರ್ 60 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 42 ರನ್ ಗಳಿಸಿದ್ದರು.