2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕಟ್ ಇರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಒಲಿಂಪಿಕ್ಸ್ ನ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿದ್ದು, ಕ್ರಿಕೆಟ್ ಕಾಣಿಸಿಕೊಂಡಿಲ್ಲ.
ಕ್ರಿಕೆಟ್ ಜೊತೆಗೆ ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಹಾಗೂ ಪೆಂಟಥ್ಲಾನ್ ಕ್ರೀಡೆಗಳು ಕೂಡ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಬಾಕ್ಸಿಂಗ್ ಹಾಗೂ ವೇಟ್ ಲಿಪ್ಟಿಂಗ್ ಕೂಡ ಪಟ್ಟಿ ಸೇರಬೇಕಾದರೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪವಾಗಬೇಕಾಗಿದೆ. ಬದಲಾವಣೆ ತರಲು ಕ್ರೀಡಾ ಸಂಸ್ಥೆಗಳಿಗೆ ಒಲಿಂಪಿಕ್ಸ್ ಸಮಿತಿ 18 ತಿಂಗಳ ಗಡುವು ನೀಡಿದೆ.
ಒಲಿಂಪಿಕ್ಸ್ ನ ಪಟ್ಟಿಯಲ್ಲಿ ಲ್ಲಿ 28 ಕ್ರೀಡೆಗಳು ಸ್ಥಾನ ಪಡೆದಿವೆ. ಬಾಕ್ಸಿಂಗ್ ಹಾಗೂ ವೇಟ್ ಲಿಪ್ಟಿಂಗ್ ಕೂಡ ಸೇರದಿರುವುದಕ್ಕೆ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಾಕ್ಸಿಂಗ್ ಹಾಗೂ ವೆಟ್ ಲಿಫ್ಟಿಂಗ್ ಸಮಸ್ಯೆಯ ಶಿಶುಗಳಾಗಿವೆ ಎಂದು ಹೇಳಿದ್ದಾರೆ.
ಮಾಡ್ರನ್ ಪೆಂಟಥ್ಲಾನ್ ನಿಂದ ಈಕ್ವೆಸ್ಟ್ರಿಯನ್ ಜಂಪಿಂಗ್ ತೆಗೆದು ಹಾಕುವಂತೆ ಸಮಿತಿ ಹೇಳಿದೆ. ಏಕೆಂದರೆ, ಈ ಆಟ ಆಡುವಾಗ ಕ್ರೀಡಾಪಟುವೊಬ್ಬರು ಕುದರೆಗೆ ಭಾರೀ ಪೆಟ್ಟು ನೀಡಿದ್ದರು. ಹೀಗಾಗಿ ಹಿಂಸಾತ್ಮಕ ದೃಶ್ಯ ತಡೆಯಲು ಆಗುವುದಿಲ್ಲ ಎಂದು ಸಮಿತಿ ಹೇಳಿದೆ. ಈ ಬಾರಿ ಒಲಿಂಪಿಕ್ಸ್ ಪಟ್ಟಿಯಲ್ಲಿ ಬ್ರೇಕ್ ಡ್ಯಾನ್ಸ್ ಸೇರ್ಪಡೆಯಾಗಿದೆ.
ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಒಮ್ಮೆ ಮಾತ್ರ ಕ್ರಿಕೆಟ್ ಸ್ಥಾನ ಪಡೆದಿತ್ತು. 1900ರಲ್ಲಿ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಡಲಾಗಿತ್ತು. ಆಗ 2 ತಂಡಗಳ ಮಾತ್ರ ಭಾಗವಹಿಸಿದ್ದವು. ಸದ್ಯ ಐಸಿಸಿಯ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ.