ಬೆಂಗಳೂರು ಮೂಲದ ಫಿನ್‌ಟೆಕ್ ಸಂಸ್ಥೆ ’ಕ್ರೆಡ್’ ತನ್ನ ವಿಶಿಷ್ಟ ಜಾಹೀರಾತುಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿದೆ. 2018ರಲ್ಲಿ ಸ್ಥಾಪಿತವಾದ ಕ್ರೆಡ್ ಕ್ರೀಡಾ ಸಾಧಕರು, ನಟರು ಹಾಗೂ ಗಾಯಕರನ್ನು ವಿನೂತನವಾಗಿ ತೋರುವ ಮೂಲಕ ತನ್ನ ಜಾಹೀರಾತುಗಳಿಂದೇ ಪ್ರತ್ಯೇಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದೆ.
ಕೋಪಗೊಂಡಿರುವ ರಾಹುಲ್ ದ್ರಾವಿಡ್ ಇರಬಹುದು, ಮಗುವಿನಂತೆ ಆಡುತ್ತಿರುವ ಕಪಿಲ್ ದೇವ್ ಇರಬಹುದು ಅಥವಾ ಚಿನ್ನದ ಹುಡುಗ ನೀರಜ್ ಚೋಪ್ರಾ ಇರಬಹುದು, ಪ್ರತಿಯೊಬ್ಬರನ್ನೂ ವಿಶಿಷ್ಟವಾಗಿ ತೋರುತ್ತಿದೆ ಕ್ರೆಡ್.
BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 267 ಜನ ಬಲಿ
ಇದೀಗ ಮೊಟ್ಟ ಮೊದಲ ಬಾರಿಗೆ ಅನಿಮೇಟೆಡ್ ಪಾತ್ರಗಳನ್ನು ಬಳಸಿಕೊಂಡು ಜಾಹೀರಾತು ಮಾಡಲು ಮುಂದಾಗಿರುವ ಕ್ರೆಡ್, ಭಾರತೀಯ ಕಾಮಿಕ್ ಪುಸ್ತಕದ ಇತಿಹಾಸದ ಅತ್ಯಂತ ಜನಪ್ರಿಯ ಪಾತ್ರಗಳಾದ ಚಾಚಾ ಚೌಧರಿ ಹಾಗೂ ಸುಪ್ಪಂಡಿರನ್ನು ಬಳಸಿಕೊಂಡಿದೆ.
ಕಾರ್ಟೂನಿಸ್ಟ್ ಪ್ರಾಣ್ ಕುಮಾರ್ ಶರ್ಮಾ 1970ರಲ್ಲಿ ಚಾಚಾ ಚೌಧರಿ ಪಾತ್ರವನ್ನು ಸೃಷ್ಟಿಸಿದ್ದಾರೆ. ಚಾಚಾ ಚೌಧರಿ ತನ್ನ ಅತಿ ಬುದ್ಧಿವಂತಿಕೆಯಿಂದ ಜನಪ್ರಿಯನಾಗಿದ್ದ.
ಜೂಮ್ ಮೀಟಿಂಗ್ ವೇಳೆ ಹೆಚ್ ಆರ್ ಮನೆಯಲ್ಲಿ ಕಂಡ ವಸ್ತು ನೋಡಿ ನಾಚಿಕೊಂಡ ಮಹಿಳೆ..!
1983ರಲ್ಲಿ ರಾಮ್ ವಾರೀಕರ್‌ರಿಂದ ರಚಿತನಾದ ಸುಪ್ಪಂಡಿ, ಟ್ವಿಂಕಲ್ ಕಾಮಿಕ್ಸ್‌ನಲ್ಲಿ ಕಾಣಿಸಿಕೊಂಡು ಬರುತ್ತಿದ್ದಾನೆ. ತನ್ನ ಫನ್ನಿ ವರ್ತನೆಯಿಂದಾಗಿ ಸುಪ್ಪಂಡಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ.
ಆರ್ಥಿಕ ಹೊಣೆಗಾರಿಕೆ ಹಾಗೂ ಸ್ವಾತಂತ್ರ‍್ಯಕ್ಕೆ ಉತ್ತೇಜನ ನೀಡುವ ಥೀಂನ ಜಾಹೀರಾತೊಂದಕ್ಕೆ ಈ ಇಬ್ಬರನ್ನು ಕ್ರೆಡ್ ಬಳಸಿಕೊಂಡಿದೆ.