ಇಂದು ಹಣಕಾಸು ವಿಚಾರದಲ್ಲಿ ಆರೋಗ್ಯಕರ ಪರಿಸ್ಥಿಯನ್ನು ಅಳೆಯವ ಮಾಪನ ಬಳಕೆ ಹೆಚ್ಚಾಗಿದೆ. ದಿನ ದಿನಕ್ಕೂ ಕ್ರೆಡಿಟ್ ಸ್ಕೋರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.
ಪೈಸಾ ಬಜಾರ್‌ನ ವರದಿಯ ಪ್ರಕಾರ 35ರಿಂದ 40 ವರ್ಷ ವಯಸ್ಸಿನ ಗ್ರಾಹಕರು ಹೆಚ್ಚು ಕ್ರೆಡಿಟ್ ಹೆಲ್ತಿಯಾಗಿದ್ದಾರೆ, ಆದರೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕನಿಷ್ಠ ಕ್ರೆಡಿಟ್ ಹೆಲ್ತಿಯಾಗಿದ್ದಾರೆ.
ಕಳೆದ 6 ವರ್ಷಗಳಲ್ಲಿ ಪೈಸಾಬಜಾರ್ ಪ್ಲಾಟ್‌ಫಾರ್ಮ್‌ನಿಂದ 2.7 ಕೋಟಿಗೂ ಹೆಚ್ಚು ಗ್ರಾಹಕರು ತಮ್ಮ ಉಚಿತ ಕ್ರೆಡಿಟ್ ಸ್ಕೋರ್ ಮತ್ತು ವರದಿಯನ್ನು ಪಡೆದಿದ್ದಾರೆ. ಅದರ ದೊಡ್ಡ ಗ್ರಾಹಕ ಮೂಲದ ಡೇಟಾವನ್ನು ವಿಶ್ಲೇಷಿಸಿ, ಪೈಸಾಬಜಾರ್ ತನ್ನ “ಮೇಕಿಂಗ್ ಇಂಡಿಯಾ ಕ್ರೆಡಿಟ್ ಫಿಟ್” ಒಳನೋಟಗಳ ವರದಿಯ 2 ನೇ ಆವೃತ್ತಿಯನ್ನು ಸಿದ್ಧಪಡಿಸಿದೆ.
ಈ ವರದಿ ಪ್ರಕಾರ, – 25 ವರ್ಷದೊಳಗಿನ ಶೇ. 28 ಗ್ರಾಹಕರು ಮಾತ್ರ 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದಾರೆ, ಇದನ್ನು ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್‌ಗೆ ಬಲವಾದ ಮಾನದಂಡವೆಂದು ಪರಿಗಣಿಸಲಾಗುತ್ತದೆ.
– 35ರಿಂದ 40 ವರ್ಷದೊಳಗಿನ ಶೇ. 42 ಗ್ರಾಹಕರು 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸುತ್ತಿದ್ದಾರೆ. ಮನೆ ಖರೀದಿಯಂತಹ ಜೀವನದ ಪ್ರಮುಖ ಗುರಿಗಳಿಗೆ ಸಾಲವನ್ನು ಪಡೆಯುವ ಅಗತ್ಯವು ಈ ಜೀವನ ಹಂತದಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ.
– ದೇಶದಲ್ಲಿ ಹೆಚ್ಚುತ್ತಿರುವ ಕ್ರೆಡಿಟ್ ಸ್ಕೋರ್ ಜಾಗೃತಿಯ ಸ್ಪಷ್ಟ ಚಿತ್ರಣ ಕಾಣಿಸಿದೆ. ತಮ್ಮ ಉಚಿತ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವವರ ಸಂಖ್ಯೆ 2 ಮತ್ತು 3 ಹಂತದ ನಗರಗಳ ಗ್ರಾಹಕರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಾಣಿಸಿದೆ.
– 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವ ಸುಮಾರು ಶೇ. 43ರಷ್ಟು ಮೆಟ್ರೋ ನಗರಗಳ ಗ್ರಾಹಕರು ಹೆಚ್ಚು ಕ್ರೆಡಿಟ್ ಹೆಲ್ತಿಯಾಗಿ ಕಾಣಿಸಿದ್ದಾರೆ. ಮತ್ತೊಂದೆಡೆ, ಮೆಟ್ರೋ ಅಲ್ಲದ ಪೈಸಾಬಜಾರ್ ಗ್ರಾಹಕರ ಪೈಕಿ 750 ಮತ್ತು ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರುವವರ ಪ್ರಮಾಣ ಸುಮಾರು ಶೇ.36ರಷ್ಟಿದೆ.