ಕೊರೊನಾದಿಂದಾಗಿ ಜನರ ವಹಿವಾಟಿನ ವಿಧಾನ ಬದಲಾಗಿದೆ. ನಗದಿಗಿಂತ ಜನರು ಡಿಜಿಟಲ್ ಪೇಮೆಂಟ್ ಇಷ್ಟಪಡ್ತಿದ್ದಾರೆ. 2021ರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಾಗಿ ಡಿಜಿಟಲ್ ಪಾವತಿ, ವ್ಯಾಲೆಟ್ ಬಳಕೆ ಮೂಲಕವೇ ಶಾಪಿಂಗ್ ಮಾಡಿದ್ದಾರೆ. ಈ ಬಗ್ಗೆ ಕ್ರೆಡ್ ತನ್ನ ಡೇಟಾವನ್ನು ಬಿಡುಗಡೆ ಮಾಡಿದೆ.
ಜೂನ್‌ನಿಂದ ಅಕ್ಟೋಬರ್ 2021 ರ ಅವಧಿಯಲ್ಲಿ ಡಿಜಿಟಲ್ ಪಾವತಿಗಳು ಮತ್ತು ವ್ಯಾಲೆಟ್ ಬಳಕೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹೆಚ್ಚಿನ ಜನರು ಮನೆ ಬಾಡಿಗೆ ಮತ್ತು ಶಿಕ್ಷಣ ಶುಲ್ಕವನ್ನು ಕ್ರೆಡಿಟ್ ಮೂಲಕ ಪಾವತಿಸಿದ್ದಾರೆ. ಜನವರಿಯಿಂದ ಏಪ್ರಿಲ್ ಮತ್ತು ಆಗಸ್ಟ್ ನಿಂದ ಅಕ್ಟೋಬರ್‌ವರೆಗೆ ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಶಾಪಿಂಗ್‌ಗೆ ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ. ಲಾಕ್ ಡೌನ್ ನಂತ್ರ ಅಂದ್ರೆ ಜುಲೈನಿಂದ ಅಕ್ಟೋಬರ್ ವರೆಗೆ ಆಹಾರ, ಪಾನೀಯದ ಖರ್ಚಿಗೂ ಕ್ರೆಡಿಟ್ ಕಾರ್ಡ್ ಬಳಸಲಾಗಿದೆ.
ಇಷ್ಟೇ ಅಲ್ಲ, ಹಬ್ಬದ ಋತುವಿನಲ್ಲಿ ಜನರು ಹೆಚ್ಚಾಗಿ ಪ್ರಯಾಣಕ್ಕೆ ಆದ್ಯತೆ ನೀಡಿದ್ದಾರೆ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪ್ರಯಾಣ ವೆಚ್ಚವನ್ನು ಭರಿಸಿದ್ದಾರೆ.
2021ರ ಸೆಪ್ಟೆಂಬರ್ ನಲ್ಲಿ 1,103.11 ಕೋಟಿ ರೂ.ಗಳಷ್ಟು ಹಣವನ್ನು ಪ್ರಯಾಣಕ್ಕಾಗಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಲಾಗಿದೆ. ಮಾಲ್ಡೀವ್ಸ್ ಮತ್ತು ದುಬೈ ಪ್ರವಾಸಕ್ಕೆ ಜನರು ಹೆಚ್ಚು ಆಸಕ್ತಿ ತೋರಿದ್ದಾರೆ. ಭಾರತದಲ್ಲಿ ಗೋವಾ, ಕೂರ್ಗ್, ಜೈಪುರ, ಉದಯಪುರ, ಬೆಂಗಳೂರು ಮತ್ತು ಮುಂಬೈ ಪ್ರವಾಸಕ್ಕೆ ಆದ್ಯತೆ ನೀಡಿದ್ದರು.