ಪ್ರತಿ ದಿನ ಒಂದಲ್ಲ ಒಂದು ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಕರೆ ಬರುತ್ತಲೆ ಇರುತ್ತೆ. ಕ್ರೆಡಿಟ್ ಕಾರ್ಡ್ ಬಹುತೇಕರ ಕೈನಲ್ಲಿರುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯುವ ಜನರು ಅದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಇದ್ರಿಂದಾಗಿ ಮೈಮೇಲೆ ಒಂದಿಷ್ಟು ಹೊರೆ ಹಾಕಿಕೊಳ್ತಾರೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ಮಾಡುವ ಸಣ್ಣಪುಟ್ಟ ತಪ್ಪು, ಅವರ ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣವಾಗುತ್ತದೆ.
ಎಟಿಎಂನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಎಂದೂ ಹಣ ವಿತ್ ಡ್ರಾ ಮಾಡಬಾರದು. ಸಾಮಾನ್ಯವಾಗಿ ಎಟಿಎಂ ಕಾರ್ಡ್ ಮೂಲಕ ಹಣ ವಿತ್ ಡ್ರಾ ಮಾಡಿದ್ರೆ ಅದಕ್ಕೆ ಬಡ್ಡಿ ಕಟ್ಟಬೇಕಾಗಿಲ್ಲ. ಅದೇ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ರೆ ಬಡ್ಡಿ ಕಟ್ಟಬೇಕಾಗುತ್ತದೆ. ಹಣ ವಿತ್ ಡ್ರಾ ಮಾಡಿದ ದಿನದಿಂದಲೇ ಬಡ್ಡಿ ಶುರುವಾಗುತ್ತದೆ. ಈ ಬಡ್ಡಿ ತಿಂಗಳಿಗೆ ಶೇಕಡಾ 2.5 ರಿಂದ ಶೇಕಡಾ 3.5ರಷ್ಟಿರುತ್ತದೆ.
ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ನ. 29 ರಿಂದ ಮಧ್ಯ ವಾರ್ಷಿಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ
ನಿಮ್ಮ ಕ್ರೆಡಿಟ್ ಕಾರ್ಡ್ ವಿದೇಶದಲ್ಲಿ ಬಳಸಲು ಅನುಮತಿಸಿದ್ದರೂ ವಿದೇಶದಲ್ಲಿ ಇದ್ರ ಬಳಕೆ ತಪ್ಪಿಸಿ. ವಿದೇಶದಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದಕ್ಕಾಗಿ ವಿದೇಶಿ ಕರೆನ್ಸಿ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿನಿಮಯ ದರದಲ್ಲಿನ ಏರಿಳಿತಗಳು ಸಹ ಪರಿಣಾಮ ಬೀರುತ್ತವೆ.
ಕ್ರೆಡಿಟ್ ಕಾರ್ಡ್ ಪಡೆದ ನಂತ್ರ ಜನರು ಲೆಕ್ಕ ಮರೆಯುತ್ತಾರೆ. ಮನಸ್ಸಿಗೆ ಬಂದಂತೆ ಕ್ರೆಡಿಟ್ ಕಾರ್ಡ್ ಉಜ್ಜುತ್ತಾರೆ. ಅವರಿಗೆ ಕಾರ್ಡ್ ಮಿತಿ ಮರೆತಿರುತ್ತದೆ. ನೀವು ಮಿತಿಗಿಂತ ಹೆಚ್ಚು ಬಳಕೆ ಮಾಡಿದ್ದರೆ ಕಂಪನಿಯು ಶುಲ್ಕ ವಿಧಿಸುತ್ತದೆ. ಇದಲ್ಲದೆ ಇದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಬ್ಯಾಲೆನ್ಸ್ ವರ್ಗಾವಣೆ ಅವಕಾಶ ಕ್ರೆಡಿಟ್ ಕಾರ್ಡ್ ನಲ್ಲಿದೆ. ಒಂದು ಕ್ರೆಡಿಟ್ ಕಾರ್ಡ್ ಸಾಲವನ್ನು ಇನ್ನೊಂದು ಕಾರ್ಡ್ ಮೂಲಕ ಪಾವತಿ ಮಾಡಬಹುದು. ಆದ್ರೆ ಇದು ಅನಿವಾರ್ಯವಿದ್ದಾಗ ಮಾತ್ರ. ಒಂದಕ್ಕೆ ಒಂದು, ಒಂದಕ್ಕೆ ಒಂದರಂತೆ ಮುಂದುವರೆದ್ರೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.