ಶಾಪಿಂಗ್ ಗೀಳಿನ ಮಂದಿಗೆ ಹೊಸ ವರ್ಷದ ಸಂದರ್ಭದಲ್ಲಿ ಭಾರೀ ಖರ್ಚುಗಳು ಬೀಳುತ್ತವೆ. ನೀವೂ ಇಂಥ ಒಬ್ಬರಾಗಿದ್ದು, ನಿಮ್ಮ ಆಸೆಗಳು ಮತ್ತು ಬಿಲ್‌ಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಚಿಂತಿಸುತ್ತಿದ್ದೀರಾ ? ಚಿಂತಿಸಬೇಡಿ, ನಿಮ್ಮ ಕ್ರೆಡಿಟ್ ಕಾರ್ಡ್ ಇಂಥ ಸನ್ನಿವೇಶಗಳಲ್ಲಿ ಉಪಯೋಗಕ್ಕೆ ಬರುತ್ತದೆ.
ಒಳ್ಳೆ ಕ್ಯಾಶ್‌ಬ್ಯಾಕ್ ಮತ್ತು ಉತ್ತಮ ಡಿಸ್ಕೌಂಟ್‌ಗಳ ಆಫರ್‌ಗಳನ್ನು ಕೊಡುವ ಟಾಪ್ ಕ್ರೆಡಿಟ್ ಕಾರ್ಡ್‌ಗಳತ್ತ ಒಮ್ಮೆ ನೋಡೋಣ
ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳ ಉಚಿತ ಶಿಕ್ಷಣಕ್ಕೆ RTE ಪ್ರವೇಶ ವೇಳಾಪಟ್ಟಿ ಪ್ರಕಟ
ಅಮೇಜ಼ಾನ್ ಪೇ ಕಾರ್ಡ್
ಅಮೇಜ಼ಾನ್ ಪೇ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವ ಮೂಲಕ ನೀವು ಶುಲ್ಕ-ರಹಿತ ಇಎಂಐ ಪ್ರಯೋಜನಗಳೊಂದಿಗೆ ಒಳ್ಳೆಯ ಉಳಿತಾಯ ಮಾಡಬಹುದು. ಪ್ರೈಂ ಬಳಕೆದಾರರಿಗೆ ಅಮೇಜ಼ಾನ್‌ನಲ್ಲಿ ಮಾಡುವ ಖರೀದಿ ಮೇಲೆ ಕಾರ್ಡ್ ಮೂಲಕ 5% ಡಿಸ್ಕೌಂಟ್ ಸಿಗಲಿದೆ. ಪ್ರೈಂಯೇತರ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ 3%ನಷ್ಟಿರುತ್ತದೆ. ಅಮೇಜ಼ಾನ್‌ನೊಂದಿಗೆ ಪಾಲುದಾರರಾದ ವರ್ತಕರಿಂದ 2 ಪ್ರತಿಶತ ಕ್ಯಾಶ್‌ಬ್ಯಾಕ್ ಸಿಗಲಿದ್ದು ಮಿಕ್ಕೆಲ್ಲಾ ವ್ಯವಹಾರಗಳ ಮೇಲೆ 1 ಪ್ರತಿಶತ ಕ್ಯಾಶ್‌ಬ್ಯಾಕ್ ಇದೆ.
ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್
ಸಿಟಿ ಬ್ಯಾಂಕ್‌ನ ಶಾಪರ್ಸ್ ಸ್ಟಾಪ್ ಫರ್ಸ್ಟ್ ಸಿಟಿಜ಼ನ್ ಕ್ರೆಡಿಟ್ ಕಾರ್ಡ್‌ನಲ್ಲಿ ಮೊದಲ ವರ್ಷದ ಪ್ರಯೋಜನದ ರೂಪದಲ್ಲಿ 5,250 ರೂ.ಗಳಷ್ಟು ಅನುಕೂಲಗಳಿದ್ದು, 300ರೂ.ಗಳಿಗೆ ಸಮನಾದ 500 ಫರ್ಸ್ಟ್ ಸಿಟಿಜ಼ನ್ ಪಾಯಿಂಟ್ಸ್ ಸಹ ಸಿಗಲಿದೆ. ಇದು ಕಾರ್ಡ್ ವಿತರಣೆಯಾದ ಮೊದಲ 30 ದಿನಗಳ ಒಳಗೆ ಮಾಡುವ ಖರ್ಚಿನ ಮೇಲೆ ಅನ್ವಯಿಸಲಿದೆ. ಇದೇ ಕಾರ್ಡ್ ಮೇಲೆ ನೀವು ಶಾಪರ್ಸ್ ಸ್ಟಾಪ್‌ನಲ್ಲಿ ಮಾಡುವ ಖರೀದಿ ಮೇಲೆ 1 ಪ್ರತಿಶತ ಸರ್‌ಚಾರ್ಜ್ ಹಿಂಪಡೆತ ಸಿಗಲಿದೆ. 30,000 ರೂ. ಮೀರಿದ ವೆಚ್ಚಗಳ ಮೇಲೆ ಕಾರ್ಡ್ ಶೂನ್ಯ ವಾರ್ಷಿಕ ಶುಲ್ಕದ ಆಫರ್ ಕೊಟ್ಟಿದೆ.
ಫ್ಲಿಪ್‌ಕಾರ್ಟ್ ಆಕ್ಸಿಸ್ ಕ್ರೆಡಿಟ್ ಕಾರ್ಡ್
ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದಲ್ಲಿ ಮಾಡುವ ಎಲ್ಲಾ ಶಾಪಿಂಗ್ ಮೇಲೆ 5% ಕ್ಯಾಶ್‌ಬ್ಯಾಕ್ ಸಿಗಲಿದ್ದು, ಆನ್ಲೈನ್ ಪ್ಲಾರ್ಟ್‌ಫಾರಂಗಳಾದ ಸ್ವಿಗ್ಗಿ, ಊಬರ್, ಪಿವಿಆರ್ ಮತ್ತು ಇತರೆ ಪೋರ್ಟಲ್‌ಗಳಲ್ಲಿ ಮಾಡುವ ಖರ್ಚಿನ ಮೇಲೆ 4% ಕ್ಯಾಶ್‌ಬ್ಯಾಕ್ ಸಿಗಲಿದೆ. ಮಿಕ್ಕೆಲ್ಲಾ ಖರ್ಚುಗಳ ಮೇಲ 1.5% ನಗದು ಹಿಂಪಡೆತ ಸಿಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಖರೀದಿ ಮೇಲೆ 500 ರೂ.ಗಳ ವೌಚರ್ ಒಂದನ್ನು ಸಹ ಕಾರ್ಡ್ ನೀಡಲಿದೆ. ಈ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕ 500ರೂ.ಗಳು.
ಎಚ್‌ಡಿಎಫ್‌ಸಿ ಮಿಲೆನಿಯಾದ ಕ್ರೆಡಿಟ್ ಕಾರ್ಡ್
ನೀವು ಅಮೇಜ಼ಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಖರೀದಿ ಮಾಡಲು ಇಚ್ಛಿಸಿದಲ್ಲಿ ಎಚ್‌ಡಿಎಫ್‌ಸಿ ಮಿಲೆನಿಯಾದ ಕ್ರೆಡಿಟ್ ಕಾರ್ಡ್ ಮೂಲಕ ಒಳ್ಳೆಯ ಡಿಸ್ಕೌಂಟ್‌ಗಳು ಮತ್ತು ಆಫರ್‌ಗಳನ್ನು ಪಡೆಯಬಹುದಾಗಿದೆ. ಈ ಕಾರ್ಡ್ ಬಳಸಿ ಫ್ಲಿಪ್‌ಕಾರ್ಟ್ ಮತ್ತು ಅಮೇಜ಼ಾನ್ ಮೂಲಕ ಮಾಡುವ ಶಾಪಿಂಗ್ ವೇಳೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಂದಿಗೆ ಫ್ಲೈಟ್ ಮತ್ತು ಹೋಟೆಲ್ ಬುಕಿಂಗ್‌ಗಳ ಮೇಲೆ ಮಿಲೇನಿಯಾ ಕ್ರೆಡಿಟ್ ಕಾರ್ಡ್ ಪೇಜ಼್ಯಾಪ್ ಮತ್ತು ಸ್ಮಾರ್ಟ್‌ಬೈ ಮುಖಾಂತರ 5% ಕ್ಯಾಶ್‌ಬ್ಯಾಕ್ ಕೊಡುತ್ತದೆ. ಈ ಕಾರ್ಡ್‌ನ ವಾರ್ಷಿಕ ಸೇವಾ ಶುಲ್ಕ 1,000 ರೂ.ಗಳಷ್ಟಿದೆ.
ಎಸ್‌ಬಿಐ ಸಿಂಪ್ಲಿಕ್ಲಿಕ್ ಕ್ರೆಡಿಟ್ ಕಾರ್ಡ್
ವಾರ್ಷಿಕ 499 ರೂ.ಗಳ ಶುಲ್ಕದಲ್ಲಿ ಸಿಗಲಿರುವ ಎಸ್‌ಬಿಐ ಸಿಂಪ್ಲಿಕ್ಲಿಕ್ ಕ್ರೆಡಿಟ್ ಕಾರ್ಡ್ ಆನ್ಲೈನ್ ಪ್ಲಾಟ್‌ಫಾರಂಗಳಾದ ಅಮೇಜ಼ಾನ್, ಕ್ಲಿಯರ್‌ಟ್ರಿಪ್, ಬುಕ್‌ಮೈಶೋ, ಲೆನ್ಸ್‌ಕಾರ್ಟ್ ಹಾಗೂ ಇತರ ಆನ್ಲೈನ್ ಪಾಲುದಾರಿಕೆಗಳ ಮೂಲಕ ರಿವಾರ್ಡ್‌ಗಳನ್ನು ಕೊಡುತ್ತಾ ಬಂದಿದೆ. ಎಸ್‌ಬಿಐ ಸಿಂಪ್ಲಿಕ್ಲಿಕ್ ಕ್ರೆಡಿಟ್ ಕಾರ್ಡ್ ಪಡೆದ ವೇಳೆ ಆರಂಭಿಕ ಪ್ರಯೋಜನವಾಗಿ ಅಮೇಜ಼ಾನ್‌ನಲ್ಲಿ 500 ರೂ.ಗಳ ಗಿಫ್ಟ್ ಕಾರ್ಡ್ ನೀಡಲಾಗುತ್ತದೆ.