ಅಕ್ಟೋಬರ್ನಲ್ಲಿ 12%ದಷ್ಟು ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ವೆಚ್ಚವು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. ಐಸಿಐಸಿಐ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ಗಳ ನೇತೃತ್ವದಲ್ಲಿ ಕಳೆದ ತಿಂಗಳು 26% ಪ್ರಗತಿಯನ್ನು ಕ್ರೆಡಿಟ್ ಕಾರ್ಟ್ ವೆಚ್ಚ ಕಂಡಿತ್ತು.
ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಅಕ್ಟೋಬರ್ ತಿಂಗಳಲ್ಲಿ 13,36,000 ಹೊಸ ಕ್ರೆಡಿಟ್ ಕಾರ್ಡ್ಗಳು ಸೇರಿಕೊಂಡಿವೆ. ಈ ಮೂಲಕ ಒಟ್ಟಾರೆ ಕ್ರೆಡಿಟ್ ಕಾರ್ಡ್ನ ಬೇಸ್ 6.64 ಕೋಟಿ ತಲುಪಿದ್ದು, 11.7%ದಷ್ಟು ವಾರ್ಷಿಕ ಪ್ರಗತಿ ದಾಖಲಿಸಿದೆ. ಇದು ಕಳೆದ 14 ತಿಂಗಳಲ್ಲೇ ಅತ್ಯಂತ ಗರಿಷ್ಠ ದರದ ಪ್ರಗತಿಯಾಗಿದೆ ಎಂದು ತಿಳಿದುಬಂದಿದೆ.
ಮುಂಜಾನೆ ತಂದೆ ಹೊರ ಹೋಗುತ್ತಿದ್ದಂತೆ ಮನೆಗೆ ಬಂದ ಪ್ರಿಯಕರ, ಪುತ್ರಿಯ ಸರಸ ಸಲ್ಲಾಪ ಕಂಡು ಘೋರ ಕೃತ್ಯವೆಸಗಿದ್ದ ಆರೋಪಿ ಅರೆಸ್ಟ್
ವರದಿಗೊಂಡ ತಿಂಗಳಿನಲ್ಲಿ ಕ್ರೆಡಿಟ್ ಕಾರ್ಡ್ ಸ್ಪೆಂಡಿಂಗ್ 1,01,200 ಕೋಟಿ ರೂ.ಗಳನ್ನು ತಲುಪಿದೆ. ತಿಂಗಳೊಂದರಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ದಾಟಿದ ಕ್ರೆಡಿಟ್ ಕಾರ್ಡ್ ವೆಚ್ಚ ಇದೇ ಮೊದಲನೇಯದ್ದಾಗಿದೆ. ಆರ್ಥಿಕ ಚೇತರಿಕೆ ಹಾಗೂ ಹಬ್ಬದ ಮಾಸದ ಕಾರಣದಿಂದಾಗಿ ಈ ಬಾರಿ ಆನ್ಲೈನ್ ಶಾಪಿಂಗ್ನಲ್ಲಿ ಭರ್ಜರಿ ಏರಿಕೆ ಕಂಡು ಬಂದ ಕಾರಣ ಈ ಪ್ರಗತಿ ದಾಖಲಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದಲ್ಲಿ ಇದು 56%ನಷ್ಟು ಹೆಚ್ಚಿನ ವೃದ್ಧಿಯಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಐಸಿಐಸಿಐ ಬ್ಯಾಂಕ್ 2.78 ಲಕ್ಷ ಹೊಸ ಕ್ರೆಡಿಟ್ ಕಾರ್ಡ್ ವಿತರಿಸಿದರೆ, ಎಚ್ಡಿಎಫ್ಸಿ ಬ್ಯಾಂಕ್ 2.58 ಲಕ್ಷ ಕ್ರೆಡಿಟ್ ಕಾರ್ಡ್ಗಳು, ಆಕ್ಸಿಸ್ ಬ್ಯಾಂಕ್ 2.20 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ತಮ್ಮ ಗ್ರಾಹಕರಿಗೆ ನೀಡಿವೆ.