ನಿಮ್ಮ ಬಳಿ ಹಣವಿಲ್ಲದಿದ್ದರೂ ವಸ್ತುಗಳನ್ನು ಪರ್ಚೇಸ್ ಮಾಡಲು ಮತ್ತು ಬಿಲ್‌ಗಳನ್ನು ಪೇ ಮಾಡಲು ಕ್ರೆಡಿಟ್ ಕಾರ್ಡ್ ತುಂಬಾ ಹೆಲ್ಪ್ ಆಗುತ್ತೆ. ದುಬಾರಿ ವಸ್ತುಗಳನ್ನು ಒಂದೇ ಬಾರಿಗೆ ಖರೀದಿಸಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದಾಗ ಇ.ಎಮ್.ಐ ಮೂಲರ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ಸಹಾಯವಾಗುತ್ತೆ.
ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಕಷ್ಟದ ಟೈಮ್‌ನಲ್ಲಿ ತುಂಬಾ ಹೆಲ್ಪ್ ಆದರೂ ಸಹ ನಿಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್‌ನ್ನು ನೀವು ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡುವುದು ಸಹ ತುಂಬಾ ಇಂಪಾರ್ಟೆಂಟ್ ಆಗಿದೆ. ಇಲ್ಲದಿದ್ದರೆ ನೀವು ಕಾರ್ಡ್ ನೀಡಿದ ಸಂಸ್ಥೆಗಳಿಂದ ರೇಟ್ ಆಫ್ ಇಂಟ್ರೆಸ್ಟ್ ಮತ್ತು ಲೇಟ್ ಪೇಮೆಂಟ್‌ಗಾಗಿ ಹೆಚ್ಚಿನ ಮೊತ್ತದ ದಂಡವನ್ನು ಕಟ್ಟಬೇಕಾದಿತು. ಈ ಸಂದರ್ಭದಲ್ಲಿ ಹೆಚ್ಚಿನ ಮಂದಿಗೆ ಒಂದು ಸಂಶಯ ಕಾಡುವುದು ಸಾಮಾನ್ಯವಾಗಿದ್ದು ಅದೇನೆಂದರೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್‌ನ ಸಹಾಯದಿಂದ ಪಾವತಿಸಲು ಸಾಧ್ಯವೇ ಎಂಬುದು.
ಹೆಚ್ಚಿನ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಸೌಲಭ್ಯವನ್ನು ಒದಗಿಸುವುದಿಲ್ಲ. ಈ ರೀತಿಯ ಸೌಲಭ್ಯವನ್ನು ನೀಡುವ ಒಂದೆರಡು ಕ್ರೆಡಿಟ್ ಕಾರ್ಡ್ ವಿತರಕರು ಇದ್ದರೂ ಸಹ ಅದನ್ನು ಪಡೆದುಕೊಳ್ಳುವುದರಿಂದ ಹೆಚ್ಚುವರಿ ಶುಲ್ಕಗಳು ಮತ್ತು ಹೆಚ್ಚಿನ ಬಡ್ಡಿ ಶುಲ್ಕಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
ಮುಂಗಡವಾಗಿ ಕ್ಯಾಶ್ ಪಡೆಯುವ ಮೂಲಕ, ಇ-ವ್ಯಾಲೆಟ್ ಅನ್ನು ಬಳಸುವ ಮೂಲಕ, ಬ್ಯಾಲೆನ್ಸ್ ವರ್ಗಾವಣೆ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ ಮಾಡಬಹುದು. ಈ ರೀತಿಯ ವಿಧಾನದ ಮೂಲಕ ನಿಮ್ಮ ಕ್ರೆಡಿಟ್‌ನ ಬಾಕಿ ಮೊತ್ತವನ್ನು ನೀವು ಹೆಚ್ಚಿನ ಟೈಮ್ ಬಾಂಡ್ ಅಥವಾ ಕಡಿಮೆ ಬಡ್ಡಿದರದೊಂದಿಗೆ ಮತ್ತೊಂದು ಕ್ರೆಡಿಟ್ ಕಾರ್ಡ್‌ಗೆ ವರ್ಗಾಯಿಸಬಹುದು. ಕೆಲವು ಹೆಚ್ಚುವರಿ ಬ್ಯಾಲೆನ್ಸ್ ವರ್ಗಾವಣೆ ಶುಲ್ಕದಲ್ಲಿ ನಿಮ್ಮ ಬಿಲ್ ಅನ್ನು ಪಾವತಿಸಲು ಇದು ನಿಮಗೆ ಹೆಚ್ಚುವರಿ ಸಮಯವನ್ನು ಆರು ತಿಂಗಳವರೆಗೆ ನೀಡುತ್ತದೆ.
ಇದರ ಜೊತೆ ಕೆಲವು ಬ್ಯಾಂಕ್‌ಗಳು ಬಾಕಿ ವರ್ಗಾವಣೆ ಶುಲ್ಕವನ್ನು ಸಹ ಮನ್ನಾ ಮಾಡುತ್ತವೆ. ಆದ್ರೆ ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ವರ್ಗಾಯಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಮೊದಲನೆಯದಾಗಿ ಬ್ಯಾಲೆನ್ಸ್ ವರ್ಗಾವಣೆಯು ನಿಮ್ಮ ಸಿಬಿಲ್ ಸ್ಕೋರ್‌ನ ಮೇಲೂ ಪರಿಣಾಮ ಬೀರಬಹುದು. ನೀವು ಬಾಕಿ ವರ್ಗಾವಣೆ ಶುಲ್ಕವನ್ನು ಪಾವತಿಸಬೇಕಾಗಬಹುದು.
ನಗದು ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಆಯ್ಕೆಯಲ್ಲಿ, ನೀವು ಎ.ಟಿ.ಎಮ್ ಮೂಲಕ ಹಣವನ್ನು ಪಡೆದು, ಆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಬಳಿಕ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಆದ್ರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಲು ಇದು ಅತ್ಯಂತ ಅಪಾಯಕಾರಿ ಆಯ್ಕೆಯಾಗಿದೆ. ಯಾಕಂದ್ರೆ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ರೆ ಇದರ ಬಡ್ಡಿ ದರವು ಸಾಕಷ್ಟು ಹೆಚ್ಚಿರುತ್ತದೆ.
ಇ-ವ್ಯಾಲೆಟ್ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್ ಸೌಲಭ್ಯದಲ್ಲಿ, ನೀವು ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಇ-ವ್ಯಾಲೆಟ್ ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಬಹುದು. ಈ ರೀತಿಯ ವರ್ಗಾವಣೆಯನ್ನು ಅನುಮತಿಸುವ ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯವಾಗಿ ಎರಡು ಶೇಕಡಾ ಶುಲ್ಕವನ್ನು ವಿಧಿಸುತ್ತವೆ.
ಹೀಗಾಗಿ, ನೀವು ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್ ಬಿಲ್ ಮೂಲಕ ಬ್ಯಾಲೆನ್ಸ್ ವರ್ಗಾವಣೆ ಮೂಲಕ ಪಾವತಿಸಬಹುದು, ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು, ಅದನ್ನು ಬ್ಯಾಂಕ್ ಖಾತೆಗೆ ಠೇವಣಿ ಮಾಡಿ ಮತ್ತು ಬಿಲ್ ಪಾವತಿಸಬಹುದು ಮತ್ತು ಮೊತ್ತವನ್ನು ಇ-ವ್ಯಾಲೆಟ್ ಅಥವಾ ಬ್ಯಾಂಕ್‌ಗೆ ವರ್ಗಾಯಿಸಬಹುದು. ಈ ವಿಧಾನಗಳು ನಿಮಗೆ ಕೆಲವೊಂದಿಷ್ಟು ಸಹಕಾರಿಯಾದ್ರು ಸಹ ನಿಮ್ಮ ಒಟ್ಟಾರೆ ಕ್ರೆಡಿಟ್ ಕಾರ್ಡ್‌ನ ಬಿಲ್ ಮೊತ್ತವನ್ನು ದುಪ್ಪಟ್ಟು ಮಾಡುತ್ತದೆ, ಇದು ಇನ್ನಷ್ಟು ಸಾಲವನ್ನು ಹೆಚ್ಚು ಮಾಡಬಹುದು. ಹೀಗಾಗಿ ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಲು ಸಾಮಾನ್ಯ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.