ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 75 ಉಪ ವಿಭಾಗಗಳಲ್ಲಿ ಸದ್ಯ 36 ಹೆಲ್ತ್ ಸೂಪರ್ವೈಸರ್ಗಳು ಕೆಲಸ ಮಾಡುತ್ತಿದ್ದು, ಹೊಸದಾಗಿ 39 ಹೆಲ್ತ್ ಸೂಪರ್ವೈಸರ್ ಹುದ್ದೆಗಳನ್ನ ಸೃಜಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಹೆಲ್ತ್ ಸೂಪರ್ವೈಸರ್ಗಳು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಮಿಕ ರೋಗ ನಿಯಂತ್ರಣ ಚಟುವಟಿಕೆ, ಘನ ತ್ಯಾಜ್ಯ ನಿರ್ವಹಣೆಯ ಮೇಲುಸ್ತುವಾರಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.