
ಹೋದಲ್ಲೆಲ್ಲಾ ತಮ್ಮದೇ ಹವಾ ಎಬ್ಬಿಸಿ ಬರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ. ನವ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಸ್ಮೃತಿ, ಮಹಿಳೆಯರ ದಿನಾಚರಣೆಯಂದು ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲೂ ಸಹ ಸಖತ್ ಮಿಂಚಿದ್ದರು.
ಮಾರ್ಚ್ 21ರಂದು ಆಯೋಜಿಸಲಾಗಿದ್ದ ಈ ಕಾರ್ಯಕ್ರಮಗಳ ವೇಳೆ ಸ್ಮೃತಿ, “ರೂಪ್ ತೇರಾ ಮಸ್ತಾನಾ’ ಹಾಡಿಗೆ ನೃತ್ಯ ಮಾಡುವ ಮೂಲಕ ತಮ್ಮ ನೃತ್ಯ ಕೌಶಲ್ಯ ಮೆರೆದಿದ್ದಾರೆ. ಲೈಟ್ ಶೇಡ್ ಸೀರೆಯಲ್ಲಿ ಮಿಂಚುತ್ತಿರುವ ಸ್ಮೃತಿರ ಈ ವಿಡಿಯೋವನ್ನು ಎಎನ್‌ಐ ಏಜೆನ್ಸಿ ಟ್ವಿಟರ್‌ನಲ್ಲಿ ಶೇರ್ ಮಾಡಿದೆ.