ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆಯಡಿ 18 ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಶಲಕರ್ಮಿಗಳು ಆನ್ಲೈಿನ್ ಪೋರ್ಟಲ್ನಸಲ್ಲಿ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ಅವರು ತಿಳಿಸಿದ್ದಾರೆ.
ಈ ಯೋಜನೆಯಡಿ ನೋಂದಣಿಯಾಗುವ ಕುಶಲಕರ್ಮಿಗಳಿಗೆ ಗುರುತಿನ ಚೀಟಿ ವಿತರಿಸಲಾಗುವುದು. ನೋಂದಣಿ ನಂತರ ಕೌಶಲ್ಯ ಮಟ್ಟದ ಕುರಿತು ಪರಿಶೀಲಿಸಿ, ಟೂಲ್ಕಿರಟ್ ಖರೀದಿಗಾಗಿ 15 ಸಾವಿರ ರೂ. ನೀಡಲಾಗುವುದು. ಕುಶಲಕರ್ಮಿಗಳಿಗೆ 5 ದಿನಗಳ ಸಾಮಾನ್ಯ ತರಬೇತಿ ಹಾಗೂ 15 ದಿನಗಳ ವಿಶೇಷ ತರಬೇತಿ ನೀಡಲಾಗುತ್ತದೆ.
ತರಬೇತಿಯ ಅವಧಿಯಲ್ಲಿ ಪ್ರತಿ ದಿನಕ್ಕೆ 500 ರೂ. ತರಬೇತಿ ಭತ್ಯೆ ನೀಡಲಾಗುತ್ತದೆ. ಸಾಮಾನ್ಯ ತರಬೇತಿಯ ನಂತರ ಬ್ಯಾಂಕಿನಿಂದ 1 ಲಕ್ಷ ರೂ. ಹಾಗೂ ವಿಶೇಷ ತರಬೇತಿಯ ನಂತರ ಬ್ಯಾಂಕಿನಿಂದ 2 ಲಕ್ಷ ರೂ. ಸಾಲ ಪಡೆಯಬಹುದು. ಸಾಲವನ್ನು ಶೇ.5 ರ ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ. ಅರ್ಜಿದಾರರು ಕನಿಷ್ಟ 18 ವರ್ಷ ಆಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ನೋಂದಣಿ ಮಾಡಲಾಗುವುದು. ಉಚಿತವಾಗಿ ನೋಂದಣಿ ಮಾಡಲಾಗುವುದು. ಕುಟುಂಬದ ನೌಕರರು ಸರ್ಕಾರಿ ನೌಕರರು ಆಗಿರಬಾರದು.
ಕಳೆದ 5 ವರ್ಷಗಳಲ್ಲಿ ಸ್ವಯಂ ಉದ್ಯೋಗ/ವ್ಯಾಪಾರ ಅಭಿವೃದ್ಧಿಗಾಗಿ ಇದೇ ರೀತಿಯ ಕ್ರೆಡಿಟ್ ಆಧಾರಿತ ಯೋಜನೆಗಳ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು. ಉದಾಹರಣೆಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಪಿಎಂಇಜಿಪಿ ಮತ್ತು ಪಿಎಂ ಸ್ವನಿಧಿ, ಆದಾಗ್ಯೂ ತಮ್ಮ ಸಾಲವನ್ನು ಮರುಪಾವತಿ ಮಾಡಿದ ಮುದ್ರಾ ಮತ್ತು ಪಿಎಂ ಸ್ವನಿಧಿಯ ಫಲಾನುಭವಿಗಳು ಪಿಎಂ ವಿಶ್ವಕರ್ಮ ಅಡಿಯಲ್ಲಿ ಅರ್ಹರಾಗಿರುತ್ತಾರೆ.
ಅರ್ಹವಿರುವ ವೃತ್ತಿಗಳು: ಬಡಗಿ, ದೋಣಿ ತಯಾರಿಕೆ, ಕಮ್ಮಾರಿಕೆ, ಬೀಗ ತಯಾರಿಕರು ಅಕ್ಕಸಾಲಿಗ, ಕುಂಬಾರರು, ಶಿಲ್ಪಿಗಳು, ಚಮ್ಮಾರಿಕೆ, ಡೋಬಿ, ಟೈಲರ್, ಕ್ಷೌರಿಕ, ಗಾರೆ ಕೆಲಸ, ಬುಟ್ಟಿ, ಚಾಪೆ, ಪೊರಕೆ, ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ, ಸಾಂಪ್ರದಾಯಿಕ ಗೊಂಬೆ ತಯಾರಿಕೆ, ಮೀನಿನ ಬಲೆ ತಯಾರಿಕೆ, ಹೂವಿನ ಹಾರ ತಯಾರಿಕೆ, ಹ್ಯಾಮರ್ ಮತ್ತು ಟೂಲ್ಕಿಾಟ್ ತಯಾರಿಕೆ ಮತ್ತು ಆರ್ಮರ್.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ಕಚೇರಿಯನ್ನು ಹಾಗೂ ದೂ.ಸಂ. 08272-228746 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ.ದಿನೇಶ್ ತಿಳಿಸಿದ್ದಾರೆ.