alex Certify ಭಾರತದ ಮೊಟ್ಟ ಮೊದಲ ಬೆಳಕು & ಸೌಂಡ್​ ಪ್ರೂಫ್​ ರಸ್ತೆಯಲ್ಲಿ ಬಿರುಕು: ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್‌ ಕಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಮೊಟ್ಟ ಮೊದಲ ಬೆಳಕು & ಸೌಂಡ್​ ಪ್ರೂಫ್​ ರಸ್ತೆಯಲ್ಲಿ ಬಿರುಕು: ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್‌ ಕಿಡಿ

ಮಧ್ಯಪ್ರದೇಶದ ಸಿಯೋನಿಯಲ್ಲಿರುವ ಪೆಂಚ್​​ ಟೈಗರ್​ ರಿಸರ್ವ್​ ಮೂಲಕ ಹಾದು ಹೋಗುವ ಭಾರತದ ಮೊದಲ ಬೆಳಕು ಹಾಗೂ ಧ್ವನಿ ನಿರೋಧಕ ಎಲಿವೇಟೆಡ್​​ ರಸ್ತೆಯು ನಿರಂತರ ಮಳೆಯಿಂದಾಗಿ ದೊಡ್ಡ ಬಿರುಕು ಬಿಟ್ಟಿದೆ ಎಂದು ತಿಳಿದು ಬಂದಿದೆ.

ಎಲಿವೇಟೆಡ್​ ರಸ್ತೆಯ ಮಧ್ಯ ಹಾಗೂ ಬದಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಡಬಲ್​ ರೋಡ್​ ರಸ್ತೆಯ 200 ಮೀಟರ್​ ಭಾಗವನ್ನ ಮುಚ್ಚಬೇಕಾಗಿ ಬಂದಿದ್ದು ಇದರಿಂದಾಗಿ ಟ್ರಾಫಿಕ್​ ಜಾಮ್ ಉಂಟಾಗಿದೆ ಎನ್ನಲಾಗಿದೆ. ಈ ಎಲಿವೇಟೆಡ್​ ರಸ್ತೆಯನ್ನು ಬರೋಬ್ಬರಿ 960 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು 2 ವರ್ಷಗಳ ಹಿಂದೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಲೋಕಾರ್ಪಣೆಗೊಳಿಸಿದ್ದರು.

ಈ ಬಿರುಕು ಕಾಣಿಸಿಕೊಂಡ ಹೆದ್ದಾರಿ ಮಾರ್ಗವು ಪೆಂಚ್​ ಟೈಗರ್​ ರಿಸರ್ವ್​ ಬಫರ್​ ವಲಯದ ಮೂಲಕ ಹಾದು ಹೋಗುತ್ತದೆ. ಹೀಗಾಗಿ ವನ್ಯಜೀವಿಗಳಿಗೆ ವಾಹನಗಳ ಹಾರ್ನ್​ ಹಾಗೂ ಬೆಳಕಿನಿಂದ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಈ ಸೌಂಡ್ ಪ್ರೂಫ್​ ಹಾಗೂ ಲೈಟ್​ ಪ್ರೂಫ್​ ರಸ್ತೆಯನ್ನ ನಿರ್ಮಾಣ ಮಾಡಲಾಗಿತ್ತು. ಈ ಮಾದರಿಯ ರಸ್ತೆಯನ್ನು ನಿರ್ಮಾಣ ಮಾಡಲು ನಾಲ್ಕು ಮೀಟರ್​ ಎತ್ತರದ ಉಕ್ಕಿನ ಗೋಡೆಗಳು ಹಾಗೂ ಹೆಡ್​ಲೈಟ್​ ರೆಡ್ಯೂಸರ್​​ಗಳನ್ನು ಅಳವಡಿಸಲಾಗಿದೆ.

960 ಕೋಟಿ ರೂಪಾಯಿ ಮೌಲ್ಯದ ರಸ್ತೆ ಇಷ್ಟು ಬೇಗ ಹಾಳಾಗಿದ್ದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಇದೊಂದು ಕಳಪೆ ಗುಣಮಟ್ಟದ ರಸ್ತೆ ಅಂತಾ ಆರೋಪಿಸಿದೆ. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಖುರಾನಾ , ಭ್ರಷ್ಟಾಚಾರದಿಂದ ಹಾಳಾದ ಮತ್ತೊಂದು ಸರ್ಕಾರಿ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸರ್ಕಾರ ನಿರ್ಮಿಸಿದ ಈ ರಸ್ತೆ ಕೇವಲ ಮೂರು ವರ್ಷಗಳಲ್ಲಿ ಹದಗೆಟ್ಟಿದೆ. ಆದರೆ ನಿತಿನ್​ ಗಡ್ಕರಿಯಿಂದ ಹಿಡಿದು ಇಡೀ ಬಿಜೆಪಿ ಸರ್ಕಾರ ಈ ರಸ್ತೆಯನ್ನು ಏಷ್ಯಾದ ಅತ್ಯುತ್ತಮ ರಸ್ತೆಗಳಲ್ಲಿ ಒಂದು ಎಂದು ಬಿಂಬಿಸಿದ್ದವು ಎಂದು ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...