ಮನುಷ್ಯನ ಮಲದಲ್ಲಿ ರಕ್ಷಿಸಲಾಗಿದ್ದ ಬರೋಬ್ಬರಿ 1000 ವರ್ಷದ ಹಿಂದಿನ ಕೋಳಿ ಮೊಟ್ಟೆಯನ್ನ ಪತ್ತೆ ಮಾಡುವಲ್ಲಿ ಇಸ್ರೇಲ್ ಪುರಾತತ್ವ ಶಾಸ್ತ್ರಜ್ಞರು ಯಶಸ್ವಿಯಾಗಿದ್ದಾರೆ.
ಯಾವ್ನೆಯಲ್ಲಿ ಇಸ್ರೆಲ್ ಆಂಟಿಕ್ವಿಟೀಸ್ ಅಥಾರಿಟಿ (ಐಎಎ) ನಡೆಸಿದ ಉತ್ಖನನದ ಸಂದರ್ಭದಲ್ಲಿ ಈ ಅಪರೂಪದ ಪುರಾತನ ಮೊಟ್ಟೆಯು ಸುರಕ್ಷಿತ ಸ್ಥಿತಿಯಲ್ಲಿ ಲಭ್ಯವಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಉತ್ಖನನ ಕಾರ್ಯದ ವೇಳೆ ಪುರಾತತ್ವ ಶಾಸ್ತ್ರಜ್ಞರು ಮೊದಲ ಗುಂಡಿಯೊಂದನ್ನ ಪತ್ತೆ ಮಾಡಿದರು. ಇದರಲ್ಲಿ ಅವರು ಸುಮಾರು 1000 ವರ್ಷದ ಹಿಂದಿನ ಕೋಳಿ ಮೊಟ್ಟೆಯನ್ನ ಪತ್ತೆ ಮಾಡಿದ್ದರು. ಈ ಕೊಳಿ ಮೊಟ್ಟೆಯು ಮನುಷ್ಯನ ಮಲದ ಒಳಗೆ ಇದ್ದಿದ್ದರಿಂದ ಎಲ್ಲಿಯೂ ಒಡೆದುಹೋಗಿಲ್ಲ ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ.
ಆಸ್ಟ್ರಿಚ್ಗಳ ಮೊಟ್ಟೆಯ ಕ್ಯಾಲ್ಶಿಯಂ ಪದರವು ದಪ್ಪಗೆ ಇರೋದ್ರಿಂದ ಸಾಮಾನ್ಯವಾಗಿ ಬಹಳ ವರ್ಷ ಹಿಂದಿನ ಆಸ್ಟ್ರಿಚ್ ಹಕ್ಕಿಯ ಮೊಟ್ಟೆಗಳು ಒಮ್ಮೊಮ್ಮೆ ಸಿಕ್ಕಿ ಬಿಡುತ್ತವೆ. ಆದರೆ ಕೋಳಿ ಮೊಟ್ಟೆಗಳು ಈ ರೀತಿ ಸಿಗೋದು ಅಪರೂಪದಲ್ಲೇ ಅಪರೂಪವಾಗಿದೆ. ಈ ಮೊಟ್ಟೆಯಲ್ಲಿ ಅಲ್ಲಲ್ಲಿ ಸಣ್ಣ ಬಿರುಕಿದ್ದು ಬಿಳಿ ಬಣ್ಣದ ದ್ರಾವಣ ಸೋರಿಕೆಯಾಗಿದ್ದಿರಬಹುದು. ಆದರೆ ಆಶ್ಚರ್ಯಕರ ವಿಚಾರ ಅಂದ್ರೆ 1000 ವರ್ಷದ ಹಿಂದಿನ ಈ ಮೊಟ್ಟೆಯ ಒಳಭಾಗದಲ್ಲಿ ಹಳದಿ ಬಣ್ಣದ ದ್ರಾವಣ ಹಾಗೆಯೇ ಇದೆ ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ.
https://www.facebook.com/AntiquitiesEN/photos/pcb.645207543543395/645207083543441/?type=3&theater