![](https://kannadadunia.com/wp-content/uploads/2024/07/emergency.png)
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ತುಂಗಾ ನದಿ ತೀರದಲ್ಲಿ ತೆಪ್ಪೋತ್ಸವ ಆಚರಣೆ ಸಮಿತಿಯಿಂದ ಸಿಡಿಮದ್ದು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇದೇ ಬಾಲಕನ ಜೀವಕ್ಕೆ ಅಪಾಯ ತಂದೊಡ್ಡಿದೆ.
ಜನವರಿ 1 ರಂದು ತೆಪ್ಪೋತ್ಸವದ ನಂತರ ಸುಮಾರು ಎರಡೂವರೆ ಗಂಟೆ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆದಿದೆ. ಜನವರಿ 5ರಂದು ನದಿ ತೀರದಲ್ಲಿ ಸಿಡಿಯದೆ ಉಳಿದಿದ್ದ ಪಟಾಕಿಗಳನ್ನು ಮೂವರು ಬಾಲಕರು ಸಂಗ್ರಹಿಸಲು ಮುಂದಾಗಿದ್ದರೆ. ಈ ವೇಳೆ ಪಟಾಕಿ ಸ್ಪೋಟಗೊಂಡ ಪರಿಣಾಮ 9 ವರ್ಷದ ಬಾಲಕ ತೇಜು ಗಂಭೀರವಾಗಿ ಗಾಯಗೊಂಡಿದ್ದಾನೆ. ಉಳಿದ ಇಬ್ಬರು ಬಾಲಕರು ಪಾಲಾಗಿದ್ದಾರೆ.
ಬಾಲಕನಿಗೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಕೈ, ಮುಖ ಸುಟ್ಟು ಹೋಗಿದ್ದು, ತೀವ್ರ ಗಾಯಗಳಾಗಿವೆ. ಎರಡೂ ಕಣ್ಣುಗಳಿಗೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸಿಡಿಮದ್ದು ಪ್ರದರ್ಶನ ಮುಕ್ತಾಯವಾಗಿ 4 ದಿನಗಳು ಕಳೆದರೂ ಸುತ್ತಲಿನ ಪ್ರದೇಶ ಸ್ವಚ್ಛಗೊಳಿಸಿರಲಿಲ್ಲ. ಸುರಕ್ಷತೆಗೂ ಕ್ರಮ ಕೈಗೊಂಡಿಲ್ಲ. ಬೇಜಾವಾದ್ದಾರಿ ತೋರಿದ್ದರಿಂದ ಬಾಲಕ ತೀವ್ರ ಗಾಯಗೊಂಡಿದ್ದಾನೆ.
ಇನ್ನು ಪಟಾಕಿಯ ಭಾರಿ ಶಬ್ದಕ್ಕೆ ಪಕ್ಷಿಗಳು ಚೀರಾಟ ನಡೆಸಿ ಹಾರಿಹೋಗಿವೆ. ಅಪರೂಪದ ಜಾತಿಯ ಅನೇಕ ಪಕ್ಷಿಗಳು ಭಯದಿಂದ ನದಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ಇದೆ. ಹೀಗಾಗಿ ಒಂದು ವಾರದಿಂದ ನದಿ ಪಾತ್ರದಲ್ಲಿ ಪಕ್ಷಿಗಳ ಕಲರವ ಇಲ್ಲವಾಗಿದೆ. ಜಲಚರಗಳ ಸಾವಿಗೂ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.