ಬೆಂಗಳೂರು: ನಿಯಮಬದ್ಧ ಪಟಾಕಿ ಅಂಗಡಿಗಳ ಬೀಗ ತೆರವು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಆರೋಪದಡಿ ರಾಜ್ಯದ ಕೆಲವು ಪಟಾಕಿ ದಾಸ್ತಾನು ಮಳಿಗೆಗಳಿಗೆ ಹಾಕಿರುವ ಬೀಗವನ್ನು ಕೂಡಲೇ ತೆರವುಗೊಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ತಮ್ಮ ಪಟಾಕಿ ದಾಸ್ತಾನು ಮಳಿಗೆಗಳಿಗೆ ಬೀಗ ಹಾಕಿದ್ದು, ಅದನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಾಗೇಪಲ್ಲಿಯ ಎನ್. ಮಹಾದೇಶನ್ ಸೇರಿದಂತೆ 22 ಮಂದಿ ಪಟಾಕಿ ಮಾರಾಟಗಾರರು ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನ್ಯಾಯಪೀಠದಲ್ಲಿ ವಿಚಾರಣೆ ನಡೆದು ಈ ಆದೇಶ ನೀಡಲಾಗಿದೆ.
ಪಟಾಕಿ ದಾಸ್ತಾನು ಮಳಿಗೆ ಬೀಗ ತೆರೆದು ಮಳಿಗೆ ಅವರಣದಲ್ಲಿ ಸ್ಪೋಟಕ ಕಾಯ್ದೆಯ ಅನುಗುಣವಾಗಿ ಸುರಕ್ಷಿತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ತಹಶೀಲ್ದಾರ್ ಪರಿಶೀಲಿಸಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ.